ಜಾತಿಗೆ ಸಿಮಿತವಲ್ಲ ಕನಕದಾಸ

11knk3
ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಕನಕದಾಸರ ಜಯಂತಿಯಲ್ಲಿ ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಪ್ರಮುಖರಾದ ರಮೇಶ ನಾಯಕ, ಗುರುನಗೌಡ ಇತರರಿದ್ದರು.
Published on

ಕನಕಗಿರಿ: ದಾಸ ಶ್ರೇಷ್ಠ ಕನಕದಾಸರನ್ನು ಕೇವಲ ಒಂದೇ ಜಾತಿಗೆ ಸೀಮಿತವಾಗಿಸಬಾರದೆಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹೇಳಿದರು.

ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಹಾಲುಮತ ಸಮಾಜ ಹಾಗೂ ಭಕ್ತ ಕನಕದಾಸ ದೇವಸ್ಥಾನ ಸೇವಾ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಕ್ತ ಕನಕದಾಸರ ಜಯಂತಿಯಲ್ಲಿ ಸೋಮವಾರ ಮಾತನಾಡಿದರು.

ಡಣ್ಣಾಯಕನಾಗಿದ್ದ ಕನಕದಾಸರು, ಯುದ್ಧದಿಂದ ಪರಿವರ್ತನೆಗೊಂಡವರು. ಭಕ್ತಿಯ ಮೂಲಕ ಭಗವಾನ್ ಶ್ರೀಕೃಷ್ಣನನ್ನೇ ಒಲಿಸಿಕೊಂಡರು, ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯೇನಾದರೂ ಬಲ್ಲಿರಾ? ಎಂದು ಪ್ರಶ್ನಿಸಿ ಮೇಲು ಕೀಳು ಎನ್ನುವುದನ್ನು ತೊಡೆದು ಹಾಕಿದರು.

ಕೀರ್ತನೆಗಳ ಮೂಲಕ ದೇಶ ಸಂಚಾರಿಯಾಗಿ ಸಮಾಜದಲ್ಲಿದ್ದ ಅಂಕು ಡೊಂಕುಗಳನ್ನು ತಿದ್ದಿದರು. ಇಂತಹ ಮಹಾನ್ ವ್ಯಕ್ತಿಯನ್ನು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಪೂಜಿಸಿ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಇದಕ್ಕೂ ಮೊದಲು ಮಹಿಳೆಯರ ಕಳಶ, ಡೊಳ್ಳು ವಾಧ್ಯಗಳೊಂದಿಗೆ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ, ಪ್ರಮುಖರಾದ ರಮೇಶ ನಾಯಕ, ಅಶೋಕ ಜಾಡಿ, ಸಿದ್ದಪ್ಪ ನಿರಲೂಟಿ, ನಾಗಪ್ಪ ಹುಗ್ಗಿ, ಗುರುನಗೌಡ, ಅಮರಪ್ಪ ಗದ್ದಿ, ಹನುಮಂತ ಗೋಡಿ, ಗೋಸಲಪ್ಪ ಗದ್ದಿ, ಹನುಮೇಶ ವರನಖೇಡ, ಪರಸಪ್ಪ ಜಾಡಿ, ರಾಮಣ್ಣ, ವಿರುಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net