ಜಾತಿ ಕಾಲಂನಲ್ಲಿ ಗಾಣಿಗ ಬರೆಯಿಸಿ

24 ybl 01
ಶರಣಪ್ಪ ವಣಗೇರಿ
Published on

ಯಲಬುರ್ಗಾ: ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಗಾಣಿಗ ಎಂದು ಬರೆಯಿಸಬೇಕು ಎಂದು ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಶರಣಪ್ಪ ವಣಗೇರಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.22ರಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಅರ್ಥಿಕ ಸಮೀಕ್ಷೆ ಮತ್ತು ಜಾತಿಗಣತಿ ಆರಂಭವಾಗಿದೆ. ರಾಜ್ಯ ಗಾಣಿಗ ಸಂಘದ ನಿರ್ಣಯದಂತೆ ಗಾಣಿಗ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಗಾಣಿಗ ಎಂದು ನಮೂದಿಸಬೇಕು. ಈ ಬಗ್ಗೆ ಸಮಾಜದಿಂದ ತಾಲೂಕಿನಾದ್ಯಂತ ಮನೆ ಮನೆಗೆ ಭೇಟಿ ಮಾಡಿ ಕರಪತ್ರ ಹಂಚಲಾಗುವುದು.

ಹಿಂದುಳಿದ ಗಾಣಿಗ ಜಾತಿ 2ಎ ವರ್ಗದ ಅಡಿಯಲ್ಲಿ ಬರುವ ನಮ್ಮ ಕುಲಕಸುಬು ಗಾಣದಿಂದ ಎಣ್ಣೆ ತೆಗೆಯುವುದಾಗಿದೆ. ಗಣತಿದಾರರು ಮನೆಗೆ ಬಂದಾಗ ಗಾಣಿಗ ಸಮಾಜದವರು ಈ ಬಗ್ಗೆ ಮಾಹಿತಿ ತಿಳಿದುಕೊಂಡು ನೋಂದಾಯಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಹಿರೇಹನುಮಪ್ಪ ಬೊಮ್ಮನಾಳ, ಗೌರವ ಅಧ್ಯಕ್ಷ ಸಂಗಮೇಶ ವಾದಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ಪದಾಧಿಕಾರಿಗಳಾದ ಶರಣಪ್ಪ ಮೇಟಿ, ಮಹಾಂತೇಶ ಗಾಣಿಗೇರ, ಹನುಮಂತಪ್ಪ ಚರಾರಿ, ಕಲ್ಲಪ್ಪ ಇಂಗಳದಾಳ, ಶಶಿಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net