ಜಾತಿ ನಮೂದು ಕಾರ್ಯ ನಿಲ್ಲಲಿ

web2
ರಾಮದುರ್ಗ ಪಟ್ಟಣದಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಅಶೋಕ ಪಟ್ಟಣ ಅವರನ್ನು ಸತ್ಕರಿಸಲಾಯಿತು. ಐ.ಆರ್.ಮಠಪತಿ, ಎಸ್.ಎಂ.ಸಕ್ರಿ, ಸಿದ್ದು ಹದ್ಲಿ, ಈರಣ್ಣ ಬುಡ್ಡಾಗೋಳ ಇದ್ದರು.
Published on

ರಾಮದುರ್ಗ: ಚುನಾವಣೆಯಲ್ಲಿ ಟಿಕೆಟ್ ನೀಡಲು, ಮಂತ್ರಿ ಪದವಿಗೂ ಜಾತಿ ಲೆಕ್ಕಾಚಾರ ಮಾಡುವ ಇಂದಿನ ಸಂದರ್ಭದಲ್ಲಿ ಬಸವೇಶ್ವರರ ತತ್ವಾದರ್ಶ ಜಾರಿಗೆ ತರುವುದು ಕಷ್ಟ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಮತ್ತು ವಿವಿಧ ಶರಣ ಸಂಘಟನೆಗಳಿಂದ ಮಂಗಳವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.

ಶಾಲೆಯಲ್ಲಿ ಜಾತಿ ದಾಖಲಿಸುವುದನ್ನು ಬಿಟ್ಟರೆ ಮಾತ್ರ ಜಾತೀಯತೆಯಿಂದ ಹೊರಬರಲು ಸಾಧ್ಯ ಎಂದರು. ಸಾಹಿತಿ ಐ.ಆರ್.ಮಠಪತಿ ಮಾತನಾಡಿದರು. ಪ್ರಾಚಾರ್ಯ ಎಸ್.ಎಂ.ಸಕ್ರಿ ಸ್ವಾಗತಿಸಿದರು. ಸಿದ್ದು ಹದ್ಲಿ ನಿರೂಪಿಸಿದರು. ಈರಣ್ಣ ಬುಡ್ಡಾಗೋಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net