ಜಾತಿ-ಮತಗಳ ಭೇದ ಬೇಡ

28.ktal.01
Published on

ಕವಿತಾಳ: ಧರ್ಮಗಳು ಶಾಂತಿ ಬಯಸುತ್ತವೆ. ಯಾವುದೇ ಧರ್ಮವಾಗಲಿ ಅಧರ್ಮದಿಂದ ನಡೆಯುವಂತೆ ಹೇಳುವದಿಲ್ಲ. ಇದರಿಂದಾಗಿ ಪ್ರತಿಯೊಬ್ಬರೂ ಪ್ರಿತಿಯಿಂದ ಇರಬೇಕು ಎಂದು ಜಮಾತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಸ್ಥಳೀಯ ಘಟಕದ ಅಧ್ಯಕ್ಷೆ ಆಯಿಷಾ ಹೇಳಿದರು.

ಕಲ್ಮಠದ ಕಲ್ಯಾಣ ಮಂಟಪದಲ್ಲಿ ಜಮಾತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದಿಂದ ಆಯೋಜಿಸಿದ್ದ ಪ್ರೀತಿಯಿಂದ ಸಹಬಾಳ್ವೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತಿ, ಮತ, ಪಂಥಗಳ ಭೇದ ಹಾಗೂ ದ್ವೇಷ ಅಳಿಸಬೇಕು. ಈ ಮೂಲಕ ಪ್ರತಿಯೊಬ್ಬರೂ ಪ್ರಿತಿಯಿಂದ ಜೀವನ ನಡೆಸಬೇಕಾಗಿದೆ ಎಂದರು.

ಸಿಆರ್‌ಪಿ ಸೌಮ್ಯಾಶ್ರೀ, ಶಿಕ್ಷಕಿಯರಾದ ಪುಷ್ಪಾ, ಜಾನಕಿ, ಭವಾನಿ, ರೇಣುಕಾ, ಶಾರದಾ, ಜಯಶ್ರೀ, ಇಂದಿರಾ, ಇಮಾತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಪದಾಧಿಕಾರಿಗಳಾದ ತಾಹೀರಾ ಬೇಗಂ, ತಸ್ಕಿನ ಹುಸೇನ್, ನೌಷಿನ್, ಕೌಶರಬೇಗಂ, ರಿಯಾನ್, ನಾಸಿಮ್ ಬೇಗಂ, ಅಸ್ಮಾ, ಹುಸೇನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net