

ಮಸ್ಕಿ: ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸುವ ಸಂದರ್ಭದಲ್ಲಿ ನಾಗಮೋಹನದಾಸ ಅಧ್ಯಕ್ಷತೆಯಲ್ಲಿ ಜಾತಿಗಣಿತಿ ನಡೆದಿದ್ದು, ಮಾದಿಗರು ಜಾತಿ ಕಲಂನಲ್ಲಿ ಮಾದಿಗ ಎಂದು ಬರೆಸುವಂತೆ ಜಿ.ಪಂ.ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ತಿಳಿಸಿದರು.
ಇದನ್ನೂ ಓದಿ: ಮೇ.4 ರಂದು ಒಳಮೀಸಲಾತಿ ಜಾಗೃತಿ ಸಭೆ
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಜಾತಿಗಣತಿಗಾಗಿ ಬಂದಾಗ ಮಾದಿಗರು ಜಾತಿ ಕಲಂನಲ್ಲಿ ಮಾದಿಗ ಎಂದು ಬರೆಸಲು ಗಣತಿದಾರರಿಗೆ ತಿಳಿಸಬೇಕು ಎಂದರು.
ಸಾಹಿತಿ ಸಿ.ದಾನಪ್ಪ ಮಾತನಾಡಿ, ಮೇ 9ರಂದು ಮೀಸಲಾತಿ ಹೋರಾಟ ಸಮಿತಿಯ ಜಾಗೃತಿ ಜಾಥ ಮಸ್ಕಿಗೆ ಆಗಮಿಸಲಿದ್ದು,
ಕೆಂಚಮ್ಮನ ಗುಡಿ ಮುಂಭಾಗದಲ್ಲಿ ಮತ್ತು ಹಳೇ ಬಸ್ ನಿಲ್ದಾಣದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಬಳಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದರು. ಪುರಸಭೆ ಸದಸ್ಯ ದೊಡ್ಡ ಕರಿಯಪ್ಪ, ದುರ್ಗಾಪ್ರಸಾದ ತೊರಣದಿನ್ನಿ, ಪ್ರಶಾಂತ ನಿಲೋಗಲ್ ಇದ್ದರು.