ಇನ್ನೂ ಅನುಷ್ಠಾನವಾಗಿಲ್ಲ ಜಾತಿ ಗಣತಿ ವರದಿ

minister S.Madhu bangarappa
ಸಚಿವ ಮಧು ಬಂಗಾರಪ್ಪ
Published on

ಶಿವಮೊಗ್ಗ: ಜಾತಿ ಗಣತಿ ವರದಿ ಇನ್ನೂ ಅನುಷ್ಠಾನವೇ ಆಗಿಲ್ಲ. ಈಗಲೇ ವಿರೋಧ ಮಾಡುವುದು ಸರಿಯಲ್ಲ. ವರದಿ ಏಕಾಏಕಿ ಅನುಷ್ಠಾನ ಆಗುವುದಿಲ್ಲ. ವರದಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳು ಆಗಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುವುದು ಈಗಾಗಲೇ ವಿಳಂಬವಾಗಿದೆ. ಅಂಕಿ ಅಂಶ ಸರಿಯಾಗಿಲ್ಲ ಎಂದಾದರೆ ಅದನ್ನು ಸರಿಪಡಿಸುವ ಕೆಲಸ ಆನಂತರ ಮಾಡಬಹುದು. ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಶೇಷ ಸಂಪುಟ ಸಭೆಯನ್ನು ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಅಲ್ಲಿ ಚರ್ಚೆ ಆಗಲಿದೆ. ಅದೇ ಅಂತಿಮವಲ್ಲವೆಂದು ಕಾನೂನು ಸಚಿವರೂ ಹೇಳಿದ್ದಾರೆ. ಹಾಗಾಗಿ ವರದಿ ಅನುಷ್ಠಾನದ ಬಗ್ಗೆ ಈಗಲೇ ಊಹಾಪೋಹಗಳು ಅನಗತ್ಯವಾಗಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net