ಜಾತಿ ಗಣತಿ ವೇಳೆ ವೀರಶೈವ- ಲಿಂಗಾಯತ ನಮೂದಿಸಿ

Veerashiva_Lingayata
Published on

ತುಮಕೂರು: ದೇಶದಲ್ಲಿ ನಡೆಯುವ ಜಾತಿಗಣತಿ ಸಮೀೆಯ ಜಾತಿ ಕಲಂಗಳಲ್ಲಿ ವೀರಶೈವ- ಲಿಂಗಾಯತ ಎಂದೇ ನಮೂದಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಮನವಿ ಮಾಡಿದರು.

ನಗರದ ಮುರುಘರಾಜೇಂದ್ರ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತುಮಕೂರು ಜಿಲ್ಲಾ ಘಟಕ ಗುರುವಾರ ಆಯೋಜಿಸಿದ್ದ ಬಸವ ಜಯಂತಿ, ಮಹಾಸಭಾ ಕಾರ್ಯಾಲಯ ಪ್ರಾರಂಭೋತ್ಸವ ಹಾಗೂ ಮಹಾನಗರಪಾಲಿಕೆ ಘಟಕಗಳ ಪದಾಧಿಕಾರಿಗಳ ಸೇವಾ ದೀಕ್ಷೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಸುಮಾರು 2.50 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ವೀರಶೈವ, ಲಿಂಗಾಯಿತರು ಹೊಂದಿದ್ದು, ಈ ಹಿಂದಿನ ಜಾತಿಗಣತಿಯಲ್ಲಿ ಸಾಕಷ್ಟು ಕಡಿಮೆ ತೋರಿಸಿದ್ದಾರೆ. ಹಾಗಾಗಿ, ಈ ಬಾರಿ ನಾವೆಲ್ಲರೂ ಜಾಗೃತರಾಗಿಜಾತಿಗಣತಿ ವೇಳೆ ವೀರಶೈವ, ಲಿಂಗಾಯತ ಎಂದು ನಮೂದಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿಯೇ ಮೊದಲ ಜಾತಿ ಸಂಘಟನೆ ನಮ್ಮದು, 120 ವರ್ಷಗಳ ಹಿಂದೆಯೇ ಹಾನಗಲ್​ ಶ್ರೀಶಿವಕುಮಾರಸ್ವಾಮೀಜಿ ಮಹತ್ವದ ಉದ್ದೇಶವಿಟ್ಟುಕೊಂಡು ಮಹಾಸಭಾ ಸ್ಥಾಪಿಸಿದ್ದಾರೆ. ಆದರೆ, ಭೀಮಣ್ಣಖಂಡ್ರೆ ಅಧ್ಯಕ್ಷರಾಗುವವರೆಗೂ ಅಂತಹ ಅಭಿವೃದ್ದಿ ಕಾಣಲಿಲ್ಲ.ಆದರೆ, ಭೀಮಣ್ಣಖಂಡ್ರೆ ಅಧ್ಯಕ್ಷರಾದ ನಂತರ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದರು.

ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತ ನಿವೇಶನ ಪಡೆದು, ಸ್ವಂತ ಕಟ್ಟಡ ಕಟ್ಟಲಾಗಿದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸ್ವಂತಕಟ್ಟಡದ ಕನಸು ನನಸಾಗುತ್ತಿದೆ. ತುಮಕೂರು ನಗರದಲ್ಲಿ ನಮ್ಮವರೇ ಎಂ.ಪಿ, ಎಂಎಲ್​ಎ, ಟೂಡಾ ಅಧ್ಯಕ್ಷರು ಇದ್ದಾಗ್ಯೂ ಮಹಾಸಭಾಕ್ಕೆ ಸ್ವಂತಜಾಗ ಪಡೆಯುವಲ್ಲಿ ವಿಫಲರಾಗಿದ್ದೇವೆ.ಈಗಿನ ಅಧ್ಯಕ್ಷರ ಅವಧಿಯಲ್ಲಾದರೂ ಸ್ವಂತಜಾಗ ಪಡೆದು, ಕಟ್ಟಡ ಕಟ್ಟುವಲ್ಲಿ ಯಶಸ್ವಿಯಾಗಲಿ ಎಂದರು.

ವೀರಶೈವ- ಲಿಂಗಾಯತರಲ್ಲಿ ಸುಮಾರು 90 ಉಪಪಂಗಡಗಳಿದ್ದು,ರಾಜ್ಯದಲ್ಲಿ ಅಷ್ಟು ಪಂಗಡಗಳು ಹಿಂದುಳಿದ ವರ್ಗದ ಪಟ್ಟಿಯಲ್ಲಿವೆ.ಆದರೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ 14 ಮಾತ್ರ ಸೇರಿವೆ. ಹಾಗಾಗಿ ಯಪಿಎಸ್ಸಿ ಸೇರಿದಂತೆ ಕೇಂದ ಸರಕಾರಿ ಉದ್ಯೋಗಗಳಲ್ಲಿ ಸಾಕಷ್ಟು ಯುವಜನರು ಅವಕಾಶ ವಂಚಿತರಾಗುತ್ತಿದ್ದಾರೆ. ಇದರ ವಿರುದ್ದ ನಿರಂತರವಾಗಿ ಮಹಾಸಭಾ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಮುಂದೆಯೂ ನಡೆಸುತ್ತದೆ. ತಾವುಗಳು ಭಾಗಿಯಾಗಬೇಕು. ಸದಸ್ಯತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಜಿಲ್ಲಾ ಸಾಹಿತ್ಯ ಪರಿಷತ್​ ಅಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಮಾತನಾಡಿ, ನಮ್ಮೆಲ್ಲರ ಮೇಲೆ ಸಾಮಾಜಿಕ ಜವಾಬ್ದಾರಿಯಿದೆ. ಅದನ್ನುಅರಿತು ನಡೆಯಬೇಕಿದೆ.ನಮ್ಮ ಮುಂದೆ ಸಾಮಾಜಿಕ ಸೇವೆ ಹಲವರು ಐಕಾನ್​ಗಳಿದ್ದಾರೆ, ಅವರ ಸಮಾಜ ಸೇವೆ ನಮಗೆ ದಾರಿದೀಪವಾಗಬೇಕು. ಪರಸ್ವರ ಹಂಚಿಕೆ ಮೂಲಕ ವ್ಯಾಪಾರ, ವ್ಯವಹಾರ ವೃದ್ದಿಸಿಕೊಂಡು ಸಮಾಜದ ಏಳಿಗೆಗೆ ದುಡಿಯಲು ಮುಂದಾಗೋಣ ಎಂದರು.ಸೇವಾದೀಕ್ಷೆ ಬೋಧಿಸಿದ ಅಖಿಲ ಭಾರತ ವೀರಶೈವ- ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯಎಸ್​.ಕೆ.ರಾಜಶೇಖರ್​ ಮಾತನಾಡಿ, ಚುನಾವಣೆಯ ಮೂಲಕ ಆಯ್ಕೆಯಾದ 90 ಜನರು ಸೇವಾ ದೀಕ್ಷೆ ಪಡೆಯುತ್ತಿದ್ದು,ಸಮಾಜದ ಪ್ರತಿಯೊಬ್ಬರನ್ನು ಪರಸ್ವರ ಪ್ರೀತಿ,ವಿಶ್ವಾಸದ ಮೂಲಕ ಒಗ್ಗೂಡಿಸುವ ಕೆಲಸ ಮಾಡಬೇಕು.ವರ್ಗರಹಿತ, ವರ್ಣರಹಿತ ಸಮಾಜಕಟ್ಟಲು ನಾವೆಲ್ಲರೂ ಮುಂದಾಗಬೇಕು ಎಂದರು.

ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್​.ಪರಮೇಶ್​ ಮಾತನಾಡಿ, ರಾಜ್ಯದಲ್ಲಿ ವೀರಶೈವ-ಲಿಂಗಾಯತ ದೊಡ್ಡ ಸಮುದಾಯ. ಆದರೆ ಸಂಘಟನೆಯಲ್ಲಿಚಿಕ್ಕದಾಗಿದೆ.ಹಾಗಾಗಿ ಪ್ರತಿ ಮನೆಯಿಂದಒಬ್ಬ ಸದಸ್ಯನನ್ನಾದರೂ ನೊಂದಾಯಿಸಬೇಕೆಂಬ ಗುರಿಇಟ್ಟುಕೊಂಡು ಕೆಲಸ ಮಾಡೋಣ.ಸದಸ್ಯತ್ವಕ್ಕೆ ಹಣ ನೀಡಲು ಶಕ್ತರಲ್ಲದವರ ಹಣವನ್ನು ಮಹಾಸಭಾ ಭರಿಸಲು ಸಿದ್ದವಿದೆ.ಸಮಾಜದಿಂದ ನಮಗೆ ಏನು ಸಿಕ್ಕಿದೆ ಎಂದು ಪ್ರಶ್ನಿಸುವ ಮೊದಲು, ನಾವು ಸಮುದಾಯಕ್ಕೆ ಏನು ಮಾಡಬಹುದುಎಂಬುದನ್ನುಅರಿತು ಕೆಲಸ ಮಾಡಬೇಕಾಗಿದೆ.ದಿನದಒಂದುಗಂಟೆಯನ್ನು ಸಮುದಾಯದ ಸಂಘಟನೆಗೆ ಮೀಸಲಿಡುವಂತೆ ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಜಿಲ್ಲಾಕಚೇರಿಯನ್ನುಜಯದೇವ ಹಾಸ್ಟಲ್​ ಹಾಸ್ಟಲ್​ಆವರಣದಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್​ ಉದ್ಘಾಟಿಸಿದರು.

ಬೆಳ್ಳಾವಿಯ ಶ್ರೀಕಾರದ ವೀರಬಸವ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಗರ ವೀರಶೈವಸೇವಾ ಸಮಾಜದ ಅಧ್ಯಕ್ಷ ಎಸ್​.ಜಿ.ಚಂದ್ರಮೌಳಿ, ಮಹಾನಗರಪಾಲಿಕೆ ಘಟಕದ ಅಧ್ಯಕ್ಷ ಉಮಾಮಹೇಶ್,  ಮಾಜಿ ಸಚಿವ ಸೊಗಡುಶಿವಣ್ಣ. ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾಉಪಾಧ್ಯಕ್ಷ ಶಶಿಹುಲಿಕುಂಟೆ ಮಠ್​, ಪ್ರಧಾನ ಕಾರ್ಯದರ್ಶಿ ವಿಶ್ವನಾಥ, ಕೋಶಾಧ್ಯಕ್ಷ ಆರ್​.ಬಿ.ಜಯಣ್ಣ, ಗೀತಾ ರುದ್ರೇಶ್​, ತಳವಾರನಹಳ್ಳಿ ವಿಜಯಕುಮಾರ್​, ಉಮಾಮೇಹೇಶ್​, ಯುವಘಟಕದ ಅಧ್ಯಕ್ಷ ಡಾ.ದರ್ಶನ್​, ಮಹಿಳಾ ಘಟಕದ ಅಧ್ಯಕ್ಷೆ ಮಮತ ದಿವಾಕರ್​, ಮಹಾನಗರಪಾಲಿಕೆ ಮಹಿಳಾ ಘಟಕದಉಸ್ತುವಾರಿ ನಳಿನ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net