ಗಣತಿ ನೆಪದಲ್ಲಿ ವೀರಶೈವರು ಮೂಲೆಗುಂಪು

brm praveen
Published on

ಭರಮಸಾಗರ: ಜಾತಿಗಣತಿ ಹೆಸರಿನಲ್ಲಿ ರಾಜ್ಯದ ಬಹುಸಂಖ್ಯಾತ ಸಮುದಾಯಗಳನ್ನು ಸರ್ಕಾರ ಮೂಲೆ ಗುಂಪು ಮಾಡಲು ಹೊರಟಿದೆ ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಕಾರ್ಯ ದರ್ಶಿ ಎಸ್​ಎಂಎಲ್ ಪ್ರವೀಣ್ ಹೇಳಿದರು.

ಭರಮಸಾಗರ ಪ್ರವಾಸಿ ಮಂದಿರದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 10 ವರ್ಷಗಳ ಹಿಂದೆ ನಡೆಸಿದ ಜಾತಿಗಣತಿ ಈಗ ಜಾರಿಗೊಳಿಸಲು ಹೊರಟಿರುವುದು ಅವೈಜ್ಞಾನಿಕ. ಗಣತಿಯಲ್ಲಿ ದೊಡ್ಡ ಸಮುದಾಯಗಳ ಜನಸಂಖ್ಯೆಯನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ ಎಂದರು.

ಲಿಂಗಾಯತ, ವೀರಶೈವ ಎರಡೂ ಒಂದೇ. ಇದನ್ನು ವಿಭಜಿಸಿ ಜನಗಣತಿ ಮಾಡಿರುವುದು ಸರಿಯಲ್ಲ. ಈಗಾಗಲೇ ರಾಜ್ಯಮಟ್ಟದ ನಾಯಕರು ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ತೀರ್ವನಿಸಿದ್ದಾರೆ ಎಂದು ತಿಳಿಸಿದರು.

ಬಿ.ಟಿ.ನಿರಂಜನ್​ವುೂರ್ತಿ, ಡಿ.ಸಿ.ಕೊಟ್ರೇಶ್, ಎಂ.ಎಸ್.ಕರಿಬಸಪ್ಪ, ಡಿ.ಎಸ್.ಅಭಿಷೇಕ್, ಎನ್.ಕೆ ಸಂತೋಷ್, ಕರಡಿ ಆನಂದು, ಡಿಸಿ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net