ಆರ್ಥಿಕ ಸುಧಾರಣೆಗೆ ಜಾತಿ ಜನಗಣತಿ ಆಧಾರ

Caste census is the basis for economic reform
ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ವೀಣಾ ಕಾಶಪ್ಪನವರ, ಮಲ್ಲಿಕಾರ್ಜುನ ಮರಡಿ, ಬಸವರಾಜ ನ್ಯಾಮಗೌಡ, ತೌಫಿಕ ಪಾರ್ಥನಳ್ಳಿ ಮತ್ತಿತರರಿದ್ದಾರೆ.
Published on

ಜಮಖಂಡಿ: ವಿವಿಧ ಸಮಾಜದವರು ಯಾವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಯಲು ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ಮಾಡಿದ್ದಾರೆ. ಅದು ತಪ್ಪಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಪ್ರಶ್ನಿಸಿದರು.

ತಾಲೂಕಿನ ಮೈಗೂರ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಮೂಲಕ ರಾಜ್ಯದ ಜನತೆಯ ಆರ್ಥಿಕ ಸ್ಥಿತಿ ಸುಧಾರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ದೇಶವನ್ನು ಪ್ರಜಾಪ್ರಭುತ್ವಕ್ಕೆ ಒಳಪಡಿಸಿ, ಜನನಾಯಕರನ್ನು ಗೆಲ್ಲಿಸುವ ಮತದಾನದ ಹಕ್ಕು ನೀಡಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಬಡವರ ಕಣ್ಣಿರು ಒರೆಸುವ ಕೆಲಸವಾಗಿದೆ. ಮಹಿಳೆಯರು ಆರ್ಥಿಕ ಚಟುವಟಿಕೆಯಿಂದ ಅಭಿವೃದ್ಧಿ ಹೊಂದುತ್ತಿರುವುದರ ಕುರಿತು ವರದಿಗಳು ಬಹಿರಂಗವಾಗುತ್ತಿವೆ ಎಂದರು.

ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು. ಮಲ್ಲಿಕಾರ್ಜುನ ಮರಡಿ ಉಪನ್ಯಾಸ ನೀಡಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ಬಸವರಾಜ ನ್ಯಾಮಗೌಡ, ತೌಫಿಕ ಪಾರ್ಥನಳ್ಳಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ, ಸಂದೀಪ ಬೆಳಗಲಿ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಮುಖಂಡ ಸಿದ್ದು ಮಿಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾದೇವ ಪಾಟೀಲ, ಬಿ.ಜಿ.ಪಾಟೀಲ, ಕೆಎಂಎ್ ನಿರ್ದೇಶಕ ಲಿಂಗರಾಜ ಪಾಟೀಲ, ಡಿಎಸ್‌ಎಸ್ ವಿಭಾಗಿಯ ಸಂಚಾಲಕ ಸಂಗಮೇಶ ಕಾಂಬಳೆ, ವಕೀಲ ದೊಡಮನಿ, ಗ್ರಾಪಂ ಮಾಜಿ ಅಧ್ಯಕ್ಷ ಭರತೇಶ ಮೂಕನವರ, ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಗಂಗಾಧರ ಪೂಜಾರಿ, ಸಚಿನ ಶಿಂಗೆ, ಸುಭಾಸ ಹಿಮಕರ, ಶಂಭು ಪಡಸಾಲಿ, ಜಗದೀಶ ಹಾಲೊಳ್ಳಿ ಮತ್ತಿತರರಿದ್ದರು. ಸಾವಿತ್ರಿ ಪಡಸಾಲಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net