

ರಾಯಚೂರು ಕಾಂತರಾಜ್ ವರದಿ ಮೂಲಕ ಸಿದ್ದಪಡಿಸಲಾದ ಜಾತಿಗಣತಿ ವರದಿಯು ಸರಿಯಾಗಿಲ್ಲ ವರದಿಯಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ೪೨ ಲಕ್ಷ ಎಂದು ಹೇಳಾಗಿದ್ದು, ಇದು ಸುಳ್ಳಾಗಿದೆಂದು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅಸ್ಕಿಹಾಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತಿಗಣತಿ ವರದಿಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ ೧.೦೮ ಕೋಟಿ, ಮುಸಲ್ಮಾನ ೭೫ ಲಕ್ಷ, ಲಿಂಗಾಯತ ೭೩ ಲಕ್ಷ, ಒಕ್ಕಲಿಗ ೭೦ ಲಕ್ಷ, ಕುರುಬರು ೪೫ ಲಕ್ಷ ಹಾಗೂ ಪರಿಶಿಷ್ಟ ಪಂಗಡ ೪೨ ಲಕ್ಷ, ಎಂದು ತಿಳಿಸಲಾಗಿದೆ. ಈ ವರದಿಯಿಂದ ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗುತ್ತಿದ್ದು, ಪರಿಶಿಷ್ಟ ಜಾತಿಯ ಜನಸಂಖ್ಯೆ ೧.೦೮ ಕೋಟಿ ಎಂದು ವರದಿ ಸೋರಿಕೆಯಾಗಿರುವುದ್ದರಿಂದ ಅವರು ಬಹುಸಂಖ್ಯಾತರೆAದು ಯಾವುದೇ ರೀತಿಯ ಸಭೆಗಳನ್ನು ಮಾಡಿಲ್ಲ ಹಾಗೂ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆಯು ೪೨ ಲಕ್ಷ ಎಂದು ಸೋರಿಕೆಯ ವರದಿಯಲ್ಲಿ ಇರುವುದ್ದರಿಂದ ಇದು ಪರಿಶಿಷ್ಟ ಪಂಗಡದ ಜನಸಂಖ್ಯೆಯ ಸುಳ್ಳು ವರದಿಯಾಗಿರುತ್ತದೆ ಎಂದರು.
ನಮ್ಮ ವಾಲ್ಮೀಕಿ ಸಮಾಜದ ಗುರುಗಳಾದ ಪ್ರಸನ್ನಾನಂದ ಸ್ವಾಮಿಜಿಗಳು ಹಾಗೂ ಸಮಾಜದ ಹಿರಿಯರು ರಾಜಣ್ಣ ಹಾಗೂ ಹಾಲಿ ಸರ್ಕಾರದ ಸಚಿವರಾದ ಸತೀಶ ಜಾರಕಿಹೊಳಿ ಇವರುಗಳೆಲ್ಲಾರು ಸಮಾಜದ ಜನಸಂಖ್ಯೆಯ ಬಗ್ಗೆ ಯಾಕೆ ಕಾಳಜಿಯನ್ನು ವಹಿಸುತ್ತಿಲ್ಲ ಇದು ಖಂಡನೀಯ ಎಂದರು.
ನಮ್ಮ ಸಮಾಜದ ಜನರು ಅಂದಾಜು ೭೦ ಲಕ್ಷಕ್ಕೂ ಅಽಕ ಇದ್ದರೂ ಸಹ ಸೋರಿಕೆಯಾದ ಜಾತಿಗಣತಿ ವರದಿಯಲ್ಲಿ ಕೇವಲ ೪೨ ಲಕ್ಷ ಎಂದು ಹೇಳಿರುವುದಕ್ಕೆ ನಮ್ಮ ಸಮಾಜದ ಹಿರಿಯರು, ರಾಜಕೀಯ ವೈಕ್ತಿಗಳೇ ಕಾರಣರಾಗಿರುತ್ತಾರೆ. ದೂರಿದರು. ಇದಲ್ಲದೇ ಪರಿಶಿಷ್ಟ ಪಂಗಡದ ೧೨ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗುತ್ತಿಲ್ಲ. ಕೂಡಲೇ ಜಾತಿಗಣತಿ ವರದಿಯನ್ನು ಪೂರ್ಣ ಪ್ರಮಾಣದಲ್ಲಿನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಟಿ.ರಾಮಯ್ಯ ನಾಯಕ, ನರಸರೆಡ್ಡಿ, ಹನುಮಂತ ಬಾಪೂರು, ಗೋವಿಂದ, ಹೊನ್ನಪ್ಪ ನಾಯಕ, ನಾಗೇಂದ್ರ ನಾಯಕ ಶಾಖವಾದಿ, ಬಿ.ರಾಘವೇಂದ್ರ ನಾಯಕ ಇದ್ದರು.