ಜಾತಿಗಣತಿ ಜಾಗೃತಿಒ ಜಾಥಕ್ಕೆ ಚಾಲನೆ

raichur
raichur
Published on

 ರಾಯಚೂರು ಸರ್ಕಾರ ಒಳ ಮೀಸಲಾತಿ ಜಾರಿಗಾಗಿ ಜಾತಿ ಜನಗಣತಿಯಲ್ಲಿ ಸಮುದಾಯ ಸಂಘಟಕರು ಸರಿಯಾದ ಜಾತಿ ನಮೂದಿಸಲು ಮಾದಿಗ ಸಮುದಾಯದಿಂದ ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಾಗೃತಿ ಜಾಥಕ್ಕೆ ಮಹಾ ನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ಚಾಲನೆ ನೀಡಿದರು.

ನಂತರ ಎಂಎಲ್ಸಿ ವಸಂತ ಕುಮಾರ ಮಾತನಾಡಿ, ಒಳ ಮೀಸಲಾತಿಗಾಗಿ ಸುದೀರ್ಘವಾಗಿ ನಡೆದ ಹೋರಾಟದ -Àಲವಾಗಿ ಇಂದು ಸರ್ಕಾರ ಒಳ ಮೀಸಲಾತಿ ಜಾತಿಗೆ ಜಾತಿ ಗಣತಿ ಮಾಡುತ್ತಿದ್ದು ಸಮಾಜದ ಎಲ್ಲಾ ಬಾಂಧವರು ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಬೇಕು, ಬೇರೆ ಯಾವುದೇ ಜಾತಿ ಉಪ ಜಾತಿ ಹೆಸರು ಬರೆಯಿಸಿದರೆ ನಮ್ಮ ಮುಂದಿನ ಪೀಳಿಗೆಯು ಸೌಲಭ್ಯ, ಮೀಸಲಾತಿಯಿಂದ ವಂಚಿತರಾಗುತ್ತಾರೆ.

ರಾಜ್ಯದಲ್ಲಿ ಮೀಸಲಾತಿ ಜಾರಿಯಾಗಬೇಕೆಂಬ ಉದ್ದೇಶ ಹಾಗೂ ಕನಸ್ಸನ್ನು ಹೊಂದಲಾಗಿತ್ತು. ವಂಚಿತ ಮಾದಿಗ ಸಮಾಜದಿಂದ ಒಳ ಮೀಸಲಾತಿ ಜಾರಿಗೆ ಹೋರಾಟವೂ ನಡೆಯಿತು. ಆಂದ್ರ ತೆಲಂಗಾಣದಲ್ಲಿ ರಾಜ್ಯದಲ್ಲಿಯೂ ಈ ಬಗ್ಗೆ ಹೋರಾಟ ನಡೆದಿದ್ದು, ಹೋರಾಟಕ್ಕೆ ಹೆಚ್ಚು ಶಕ್ತಿ ಬಂದಿದೆ, ಜಿಲ್ಲೆಯ ಹೋರಾಟಗಾರರು, ಸಮಾಜದ ಮನಿರಂತರವಾಗಿ ಹೋರಾಟ ನಡೆಸಿದ್ದರಿಂದ ಸರ್ಕಾರ ಒಳ ಮೀಸಲಾತಿ ಜಾರಿಗೆ ಮುಂದಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಅಂಬಣ್ಣ ಅರೋಲಿ, ಎಂ.ವಿರೂಪಾಕ್ಷಿ, ಜೆಬಿ.ರಾಜು, ರವಿಂದ್ರ ಜಲ್ದಾರ್, ರಾಘವೇಂದ್ರ ಬೋರಡ್ಡಿ, ರಾಜು, ಕೆಪಿ ಅನಿಲ್ ಕುಮಾರ, ಜಯಣ್ಣ, ಜನಾರ್ಧನ ಹಳ್ಳಿಬೆಂಚಿ, ಸೇರಿ ನೂರಾರು ಸಂಖ್ಯೆಯಲ್ಲಿ  ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net