ಆಮೆಗತಿಯಲ್ಲಿ ಜಾತಿ ಜನಗಣತಿ

Untitled-2
Published on

ಜಿ.ಕೆ.ಸುಗ್ಗರಾಜು ನೆಲಮಂಗಲ

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ವರ್ಗೀಕರಣಕ್ಕೆ ಕೈಗೊಂಡಿರುವ ಜಾತಿ ಜನಗಣತಿ ಸಮೀೆಗೆ ತಾಂತ್ರಿಕ ತೊಡಕು ಎದುರಾಗಿದೆ.

ಹೌದು...! ಮೇ 5ರಂದು ಮೊದಲ ಹಂತದ ಸಮೀೆ ರಾಜ್ಯದಾದ್ಯಂತ ಆರಂಭವಾಗಿದ್ದು, ಮೇ 17ರವರೆಗೆ ನಡೆಯಲಿದೆ. ಪ್ರತಿಯೊಂದು ಮತಗಟ್ಟೆಯಲ್ಲೂ ಗಣತಿ ಕೈಗೊಳ್ಳಲಾಗಿದ್ದು, ಮೊಬೈಲ್​ ಮೂಲಕ ಮಾಹಿತಿ ದಾಖಲಿಸಲಾಗುತ್ತಿದೆ. ಆದರೆ, ಪದೇಪದೆ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿರುವ ಕಾರಣ ಸಮೀಾ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಸಮೀೆಯಲ್ಲಿ ತೊಡಗಿರುವ ಕೆಲ ಗಣತಿದಾರರೇ ಅಳಲು ತೋಡಿಕೊಳ್ಳುತ್ತಿದ್ದಾರೆ.

ತಾಲೂಕಿನ ಹಲವೆಡೆ ಸಮೀೆ ಆರಂಭಗೊಂಡ ಮೊದಲ ದಿನದಿಂದಲೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ, ಇದುವರೆಗೆ ಸಮಸ್ಯೆ ಸರಿಪಡಿಸಿಲ್ಲ. ಈ ಬಗ್ಗೆ ಗಣತಿದಾರರು ತಂತ್ರರೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಈಗ ಪರಿಶಿಷ್ಟ ಜಾತಿಯೇತರ ಮನೆಗಳ ವಿವರವಷ್ಟೇ ದಾಖಲಿಸಿ, ತಾಂತ್ರಿಕ ಸಮಸ್ಯೆ ಬಗೆಹರಿದ ನಂತರ ಪರಿಶಿಷ್ಟ ಜಾತಿಯವರ ವಿವರ ದಾಖಲಿಸುವಂತೆ ತಂತ್ರಜ್ಞರು ಸೂಚಿಸಿದ್ದಾರೆ ಎನ್ನಲಾಗಿದೆ. ಪರಿಶಿಷ್ಟ ಜಾತಿಯವರಾಗಿದ್ದರೆ ಹೆಚ್ಚಿನ ವಿವರಗಳನ್ನು ದಾಖಲಿಸಬೇಕಿದ್ದು, ಪರಿಶಿಷ್ಟ ಜಾತಿಯೇತರರ ಮನೆಗಳಿದ್ದರೆ ಅಷ್ಟೊಂದು ವಿವರಗಳನ್ನು ದಾಖಲಿಸಬೇಕಿಲ್ಲ. ಆದಕಾರಣ ಹೀಗೆ ಮಾಡಲಾಗುತ್ತಿದೆ ಎಂದು ಗಣತಿದಾರರು ತಿಳಿಸಿದ್ದಾರೆ.

ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದು! : ಪೂರ್ವಾಪರ ಪರಿಶೀಲಿಸದೆ ತಂತ್ರಾಂಶ ಅಭಿವೃದ್ಧಿಪಡಿಸಿರುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಪದೇಪದೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಪರಿಣಾಮ ಗಣತಿ ವೇಳೆ ಕಿರಿಕಿರಿ ಉಂಟಾಗುತ್ತಿದೆ. ಒಬ್ಬ ವ್ಯಕ್ತಿಯ ಮಾಹಿತಿ ಅಪ್​ಲೋಡ್​ ಮಾಡಬೇಕಾದರೆ ಸಾಕಷ್ಟು ವಿವರ ತುಂಬಬೇಕು. ಸಮಸ್ಯೆ ಕಾಣಿಸಿಕೊಂಡಾಗ ತಂತ್ರರಿಗೆ ತಿಳಿಸಿದರೆ, ಈ ವಿಷಯ ಮೇಲಿನವರ ಗಮನಕ್ಕೆ ತರಲಾಗಿದೆ ಎಂದು ಹೇಳುತ್ತಾರಷ್ಟೇ, ನಾಲ್ಕು ದಿನಗಳಿಂದ ಸಮೀೆ ನಡೆಸಲಾಗುತ್ತಿದೆ. ಆದರೆ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದೇ ರೀತಿ ಸಮಸ್ಯೆಯಾಗುತ್ತಿದ್ದರೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಯುವುದು ಅನುಮಾನ ಎಂದು ಹೆಸರು ಹೇಳಲು ಇಚ್ಛಿಸದ ಗಣತಿದಾರರೊಬ್ಬರು ತಿಳಿಸಿದ್ದಾರೆ.

ಗಣತಿದಾರರಿಗೆ ಕಿರಿಕಿರಿ : ತಂತ್ರಾಂಶದಲ್ಲಿ ಸಾಕಷ್ಟು ಮಾಹಿತಿ ದಾಖಲಿಸಬೇಕಿದೆ. ಆದ ಕಾರಣ ಒಂದೇ ಮನೆಯಲ್ಲಿ ಐದಾರು ಜನರಿದ್ದರೆ ಸಮೀೆ ವಿಳಂಬವಾಗುತ್ತಿದೆ. ಅಲ್ಲದೇ ಎಲ್ಲ ವಿವರ ದಾಖಲಿಸಿದ ನಂತರ ಸಬ್​ಮಿಟ್​ ಮಾಡುವಾಗ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಎಲ್ಲ ವಿವರ ಮತ್ತೆ ದಾಖಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಗಣತಿದಾರರಿಗೂ ಕಿರಿಕಿರಿ ಉಂಟು ಮಾಡಿದೆ.

ಬೇಕಾಬಿಟ್ಟಿ ಸಮೀಕ್ಷೆ ಆರೋಪ : ತಾಲೂಕಿನ ಕೆಲವೆಡೆ ಬೇಕಾಬಿಟ್ಟಿ ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕೆಲವು ಕಡೆ ಒಂದು ಮನೆಯಲ್ಲಿ ಅನೇಕ ಸದಸ್ಯರಿದ್ದರೂ ಒಬ್ಬ ವ್ಯಕ್ತಿಯ ವಿವರ ದಾಖಲಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಸಾರ್ವಜನಿಕರು ಆರೋಪಿಸಿದ್ದು, ಗಣತಿದಾರರು ಬೇಕಾಬಿಟ್ಟಿ ಸಮೀೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ರಾಜ್ಯದಾದ್ಯಂತ ನಡೆಸುತ್ತಿರುವ ಜಾತಿ ಜನಗಣತಿಯಲ್ಲಿ ಸರ್ವರ್​ ಸಮಸ್ಯೆ ಎದುರಾಗಿದ್ದು, ಸಮೀೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದೇ ರೀತಿ ಸಮಸ್ಯೆ ಎದುರಾದರೇ ಸಮೀೆ ಮಾಡಲು ಅಧಿಕಾರಿಗಳಿಗೆ ತೊಂದರೆಯಾಗುತ್ತದೆ. ರಾಜ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು. | ನರಸಿಂಹಮೂರ್ತಿ ನಗರಸಭೆ ಸದಸ್ಯ ಜಾತಿ ಜನಗಣತಿ ಸಮೀೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರದ 276 ಮತಗಟ್ಟೆಗೆ 400ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತಾಂತ್ರಿಕ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಾತಿ ಜನಗಣತಿಯಿಂದ ಸಾಕಷ್ಟು ಜನರ ಭವಿಷ್ಯ ನಿರ್ಧಾರವಾಗಲಿದ್ದು, ಪ್ರಾಮಾಣಿಕವಾಗಿ ಸಮೀೆ ನಡೆಸುವಂತೆ ಗಣತಿದಾರರಿಗೆ ನಿರ್ದೇಶಿಸಲಾಗಿದೆ. ಕಾಟಾಚಾರಕ್ಕೆ ಸಮೀೆ ನಡೆಸಿದರೆ ಅವರು ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. | ಅಮೃತ್​ ಆತ್ರೇಶ್​ ತಹಸೀಲ್ದಾರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net