

ಮೈಸೂರು: ರಂಗಾಯಣದ ವತಿಯಿಂದ ರಂಗಾಯಣದ ಅಂಗಳದ ಭೂಮಿಗೀತ ರಂಗಮಂದಿರದಲ್ಲಿ ಡಿ.10 ರಂದು ಸಂಜೆ 6.30ಕ್ಕೆ ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಎಚ್.ಎಸ್.ಶಿವಪ್ರಸಾದ್ ರಚಿಸಿರುವ ಈ ನಾಟಕವನ್ನು ಬಿ.ಆರ್.ವೆಂಕಟರಮಣ ಐತಾಳ ನಿರ್ದೇಶಿಸಿದ್ದಾರೆ. ರಂಗಾಯಣ ರೆಪರ್ಟರಿ ತಂಡ ಪ್ರಸ್ತುತ ಪಡಿಸಲಿದೆ. ದಿಗ್ವಿಜಯ ಹೆಗ್ಗೋಡು ಸಂಗೀತ ವಿನ್ಯಾಸ, ಎಚ್.ಕೆ.ಶ್ವೇತಾರಾಣಿ ವಸ್ತ್ರ ವಿನ್ಯಾಸ, ಮಹೇಶ್ ಕಲ್ಲತ್ತಿ ಬೆಳಕಿನ ವಿನ್ಯಾಸ, ಎಚ್.ಕೆ.ದ್ವಾರಕಾನಾಥ್ ವಿನ್ಯಾಸ ಜವಾಬ್ದಾರಿ ಹೊತ್ತಿದ್ದಾರೆ.