ಗೋಡಂಬಿ ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಇಲ್ಲ

sadesh_2
Published on

ಮೈಸೂರು: ಗೋಡಂಬಿಗೆ ಸಾಕಷ್ಟು ಬೇಡಿಕೆ ಇದ್ದರೂ ಬೇಡಿಕೆ ತಕ್ಕಷ್ಟು ಗೇರುಬೀಜ ಉತ್ಪಾದನೆಯಾಗುತ್ತಿಲ್ಲ ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ಅನಂತಕೃಷ್ಣ ರಾವ್ ಹೇಳಿದರು.

ಕರ್ನಾಟಕ ಗೋಡಂಬಿ ತಂಾರಕರ ಸಂಘ ನಗರದ ಕೃಷ್ಣಮೂರ್ತಿಪುರಂನ ಹೋಟೆಲ್ ವಾಲೀಕರ ಸಂಘದ ಕುತ್ತೆತ್ತೂರು ಸೀತಾರಾಮ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಗೋಡಂಬಿ ಪ್ರಚಾರ ಮತ್ತು ಜಾಗೃತಿ ಕಾಂರ್ುಕ್ರಮದಲ್ಲಿ ಮಾತನಾಡಿ, ಗೇರುಬೀಜ ಬೆಳೆಗೆ ಪ್ರೋತ್ಸಾಹ ದೊರೆತರೆ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುವುದು ಮಾತ್ರವಲ್ಲದೆ ದೇಶದ ಆರ್ಥಿಕ ಅಭಿವೃದ್ಧಿಗೂ ಪೂರಕವಾಗಲಿದೆ ಎಂದರು.

ಜಿಲ್ಲಾ ಹೋಟೆಲ್ ವಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಂುಣಗೌಡ ಮಾತನಾಡಿ, ಪ್ರಪಂಚದಾದ್ಯಂತ ಎಲ್ಲ ದೇಶಗಳಲ್ಲೂ ಗೋಡಂಬಿಯನ್ನು ಬಳಕೆ ಮಾಡಲಾಗುತ್ತದೆ. ಹಾಗಾಗಿ ಗೋಡಂಬಿಗೆ ಸಾಕಷ್ಟು ಬೇಡಿಕೆ ಇದೆ. ಸಿಹಿತಿನಿಸು ಅಂಗಡಿಗಳು, ಹೋಟೆಲ್, ರೆಸ್ಟೋರೆಂಟ್, ಬೇಕರಿ ಇತ್ಯಾದಿ ಕಡೆಗಳಲ್ಲಿ ಗೋಡಂಬಿ ಬಳಕೆ ಸರ್ವೇಸಾಮಾನ್ಯವಾಗಿದೆ. ಒಡೆದು ಪುಡಿಯಾದ ಗೋಡಂಬಿಯೂ ಕೂಡ ಗುಣಮಟ್ಟ ಮತ್ತು ಪೌಷ್ಟಿಕಕತೆ ಹೊಂದಿರುತ್ತದೆ. ಹಾಗಾಗಿ ಇಂತಹ ಗೋಡಂಬಿಯನ್ನು ವಿವಿಧ ಆಹಾರ, ತಿನಿಸುಗಳ ತಯಾರಿಕೆಗೆ ಬಳಸಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ತುಕಾರಾಮ್ ಪ್ರಭು, ಕಾಂರ್ುದರ್ಶಿ ಪಿ.ಅಮಿತ್ ಪೈ, ಖಜಾಂಚಿ ಗಣೇಶ್ ಕಾಮತ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net