ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಗೋಡಂಬಿ ಹಬ್ಬ

gggggggggggg
Published on


ಮಂಗಳೂರು : ನಗರದ ಪಾಂಡೇಶ್ವರದ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಗೋಡಂಬಿ ಹಬ್ಬ ಆರಂಭವಾಗಿದ್ದು ಏ.21ರವರೆಗೆ
ನಡೆಯಲಿದೆ.
ಕರ್ನಾಟಕ ಕ್ಯಾಶ್ಯೂ ಮ್ಯಾನುಫ್ಯಾಕ್ಚರರ್ ಅಸೋಸಿಯೇಷನ್(ಕೆಸಿಎಂಎ) ಸಹಯೋಗದಲ್ಲಿ ನಡೆಯುತ್ತಿರುವ ಈ ಹಬ್ಬದಲ್ಲಿ
ಹಲವಾರು ಬಗೆಯ ಗೇರು ಬೀಜ ಹಾಗೂ ರುಚಿಕರ ಗೋಡಂಬಿ ತಿಂಡಿ ತಿನಸುಗಳನ್ನು ಆಸ್ವಾದಿಸಬಹುದಾಗಿದೆ ಕೆಸಿಎಂಎ ಆಡಳಿತ ಮಂಡಳಿ ಸದಸ್ಯ ಅದಿತ್ ಕಲ್ಬಾವಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಗೇರುಬೀಜ ಉದ್ಯಮಕ್ಕೆ ಜಗತ್ತಿನಲ್ಲೇ ಪ್ರಸಿದ್ಧಿಯಾಗಿದೆ. ಈ ಎರಡು ಜಿಲ್ಲೆಗಳು ಗೇರು ಉದ್ಯಮದ ತವರೂರು.ಗೇರು ಉದ್ಯಮದ ಬೆಳವಣಿಗೆಯಲ್ಲಿ ಒಂದು ಸಂಘಟನೆಯಾಗಿ ಕೆಲಸ ಮಾಡಬೇಕಾಗಿದೆ . ಹಾಗಾಗಿ ಈ ಹಬ್ಬವನ್ನು
ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಗೇರು ಮತ್ತು ಗೋಡಂಬಿ ಬೆಳೆ ಮತ್ತು ವಿವಿಧ ಕ್ವಾಲಿಟಿಗಳ ಕುರಿತು ಅಭಿಪ್ರಾಯ
ವಿನಿಮಯ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
1925ರಲ್ಲಿ ಗೇರು ಉದ್ಯಮ ಜಿಲ್ಲೆಯಲ್ಲಿ ಆರಂಭವಾಗಿದೆ. ಮುಂದಿನ ವರ್ಷದಲ್ಲಿ ಈ ಉದ್ಯಮಕ್ಕೆ ನೂರರ ಸಂಭ್ರಮಕ್ಕಾಗಿ ಉದ್ಯಮದ ಕುರಿತು ಜಾಗೃತಿ, ಮೇಳಗಳನ್ನು ನಡೆಸುವ ಯೋಜನೆ ಇದೆ. ಫಿಜಾ ಬೈ ನೆಕ್ಸಸ್ ಮಾಲ್‌ನ ಒಂದನೇ ಮಹಡಿಯಲ್ಲಿ
ನಡೆಯುವ ಈ ಹಬ್ಬದಲ್ಲಿ ರಫ್ತು ಕ್ವಾಲಿಟಿಯ ಮತ್ತು ವಿವಿಧ ರೀತಿಯ ಗೋಡಂಬಿಗಳನ್ನು ಹಾಗೂ ಗೇರು ಬೀಜದ ರುಚಿಕರವಾದ ಆಹಾರಗಳನ್ನು ಸವಿಯಬಹುದಾಗಿದೆ ಎಂದು ಮಾಲ್ನ ಆಪರೇಷನ್ ಮುಖ್ಯಸ್ಥ ಸುನಿಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net