

ಸುಳ್ಯ: ಪುತ್ತೂರು ಐಸಿಎಆರ್ ಗೇರು ಸಂಶೋಧನಾ ನಿರ್ದೇಶನಾಲಯ ವತಿಯಿಂದ ಸಂಪಾಜೆ ಗ್ರಾಮದಲ್ಲಿ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಯಿತು.
ಕರ್ನಾಟಕದಲ್ಲಿ ರೈತರ ಕೃಷಿ ಜೀವನೋಪಾಯವನ್ನು ವೃದ್ಧಿಸಲು ಆರ್.ಕೆ.ವಿ.ವೈ ರಾಫ್ತಾರ್, ಅನುದಾನಿತ ಯೋಜನೆಯಡಿ ಗೇರು ಬೆಳೆಯ ಮಾದರಿ ಗ್ರಾಮ ಅಭಿವೃದ್ಧಿಪಡಿಸಲು ಸಂಪಾಜೆ ಗ್ರಾಮವನ್ನು ಸಂಸ್ಥೆಯು ದತ್ತು ಪಡೆದಿದೆ. ಗೇರು ಬೆಳೆಯಲ್ಲಿ ಮೇಲಾವರಣ (ಸವರುವಿಕೆ ಮತ್ತು ಆಕಾರ ಕೊಡುವಿಕೆ)ದ ನಿರ್ವಹಣೆ ಪ್ರದರ್ಶಿಸುವ ಉದ್ದೇಶದಿಂದ ಈ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ಎಚ್. ವಿಜ್ಞಾನಿಗಳಾದ ಡಾ.ಭಾಗ್ಯ, ಡಾ.ವಿ.ಥೊಂಡೈಮನ್, ಡಾ.ಅಶ್ವತಿ ಚಂದ್ರಕುಮಾರ್, ಡಾ.ಜ್ಯೋತಿ ನಿಶಾದ್ ಅವರನ್ನೊಳಗೊಂಡ ವಿಜ್ಞಾನಿಗಳ ತಂಡ ಗೇರು ತೋಟದಲ್ಲಿ ಪ್ರಾತ್ಯಕ್ಷಿಕೆ ನಡೆಸಿತು.
ಸಂಪಾಜೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಪಿ.ಜಗದೀಶ್, ಮಾಜಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸಿಲ್ವೆಸ್ಟರ್ ಡಿಸೋಜ, ಪುಷ್ಪರಾಜ್ ಗಾಂಭೀರ್ ಮತ್ತಿತರರಿದ್ದರು.