ಹುಬ್ಬಳ್ಳಿ: ನಗರ ಹೊರ ವಲಯದ ತಾರಿಹಾಳದಲ್ಲಿ ಇತ್ತೀಚೆಗೆ ಹಾಡಹಗಲೇ ಕಳ್ಳರು ಮನೆ ಮುಂಬಾಗಿಲು ಕೀಲಿ ಮುರಿದು 1.40ಲಕ್ಷ ರೂ. ಮೌಲ್ಯದ ನಗ-ನಾಣ್ಯ ಕಳವು ಮಾಡಿದ್ದಾರೆ.
ಮೂಲತಃ ಭದ್ರಾಪೂರ ಗ್ರಾಮದವರಾದ ತಾರಿಹಾಳ ನಿವಾಸಿ ಸೈದುಸಾಬ್ ನದಾಫ್ ಎಂಬುವವರ ಮನೆಯಲ್ಲಿ ಕಳವಾಗಿದೆ.
ಇವರು ಕೆಲಸಕ್ಕೆ ಹೋದ ವೇಳೆ ಕಳ್ಳರು ಅಲ್ಮೇರಾದಲ್ಲಿಟ್ಟಿದ್ದ 21ಗ್ರಾಂ ಚಿನ್ನಾಭರಣ, 140ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ 20 ಸಾವಿರ ರೂ. ನಗದು ಕಳುವು ಮಾಡಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.