

ಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ನಗ-ನಗದು ಕಳವು ಮಾಡಿದ ಘಟನೆ ಇಲ್ಲಿಯ ಗೋಕುಲ ರೋಡ್‌ನ ಗ್ರೀನ್ ಗಾರ್ಡನ್‌ನಲ್ಲಿ ನಡೆದಿದೆ.
ವಿ.ಕೆ. ಜೋಶಿ ಎನ್ನುವವರ ಮನೆಯಲ್ಲಿ ಕಳವಾಗಿದೆ. ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಿದ್ದ ವೇಳೆ ಯಾರು ಇಲ್ಲದ್ದು ಅರಿತ ಕಳ್ಳರು ಬಾಗಿಲ ಇಂಟರ್‌ಲಾಕ್ ಮುರಿದು 3 ಲಕ್ಷ ರೂ. ನಗದು, 30 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಕದ್ದು ಪರಾರಿಯಾಗಿದೆ. ಸೋಮವಾರ ಇಲ್ಲಿಯ ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾರದ ಹಿಂದೆ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ನಡೆದಿದ್ದು, ಈ ಪ್ರಕರಣಕ್ಕೂ ಅದೇ ಹೋಲಿಕೆ ಕಂಡು ಬರುತ್ತಿದೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.