

ಚಿತ್ರದುರ್ಗ: ಬೆಂಗಳೂರಲ್ಲಿ ಜ.19ರಿಂದ 21ವರೆಗೆ ನಡೆದ ರಾಜ್ಯವಾರ್ಷಿಕ ಪೊಲೀಸ್ ಕ್ರೀಡಾಕೂಟದಲ್ಲಿ ದಾವಣಗೆರೆ ಪೂರ್ವ ವಲಯವನ್ನು ಪ್ರತಿನಿಧಿಸಿದ್ದ ಕ ಬಡ್ಡಿ ತಂಡವು, ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.
ಈ ತಂಡದಲ್ಲಿದ್ದ ಹತ್ತು ಕ್ರೀಡಾಪಟುಗಳ ಪೈಕಿ,ಚಿತ್ರದುರ್ಗ ಜಿಲ್ಲೆಯ,ತಂಡದ ನಾಯಕ ಡಿ.ಜಿ.ರಮೇಶ್,ಎಸ್.ರಂಗಸ್ವಾಮಿ,ಎಚ್.ಮಹಮದ್ ಮುಸ್ತಫಾ ಹಾಗೂ ಪಿ.ಶಿವಕುಮಾರ್ ಅವರಿಗೆ ಎಸ್ಪಿ ಕೆ.ಪರಶುರಾಮ್ ಅವರು ಮಂಗಳವಾರ ಪ್ರಶಂಸನ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು.
ಡಿವೈಎಸ್ಪಿಗಳಾದ ಗಣೇಶ್,ರುದ್ರೇಶ್,ಪಿಐಗಳಾದ ಬಾಲಚಂದ್ರನಾಯಕ್,ರುದ್ರೇಶ್,ಯುವರಾಜ,ಪಿಎಸ್‌ಐ ವಿಶ್ವನಾಥ್,ಜಿಎಚ್‌ಎ ಪುಷ್ಪಾ, ಮತ್ತು ವೆಂಕಟಾಚಲ ಇತರರು ಇದ್ದರು.