ನಗದು, ಮೊಬೈಲ್ ಕದ್ದವನ ಬಂಧನ

BDM30-5
ಬಾದಾಮಿ ಪೊಲೀಸರು ಹಣ ಹಾಗೂ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವುದು. ಸಿಪಿಐ ಕರೆಪ್ಪ ಬನ್ನೆ, ಪಿಎಸ್‌ಐ ನೇತ್ರಾವತಿ ಪಾಟೀಲ, ಮಹಿಳಾ ಪಿಎಸ್‌ಐ ಎನ್.ಎಸ್.ಘಂಟಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
Published on

ಬಾದಾಮಿ: ಹಣ ಹಾಗೂ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕದ್ದ ಕಳ್ಳನನ್ನು ಪೊಲೀಸರು ಬಂಧಿಸಿ ನಗದು, ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ತಟಗೋಟಿ ಓಣಿಯ ನಿವಾಸಿ ಮಹಮ್ಮದರಸೂಲ ಖಾದರಸಾಬ ಬಾಣದಾರ (28) ಬಂಧಿತ. ಈತನಿಂದ 41 ಸಾವಿರ ರೂ. ನಗದು, 19 ಸಾವಿರ ರೂ. ಮೌಲ್ಯದ ಒಂದು ಮೊಬೈಲ್, 21.5 ಸಾವಿರ ರೂ. ಮೌಲ್ಯದ ಟ್ಯಾಬ್ ಸೇರಿದಂತೆ ಒಟ್ಟು 85 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದ ಆ.26 ರಂದು ಬಾದಾಮಿ ಹೊರವಲಯದ ಗೊಂದಿಕೇರಿಯಲ್ಲಿ ಕೌಶಿಕ್ ಸಿದ್ದಮಲ್ಲಯ್ಯ ಶರ್ಮಾ ಅವರ ಮನೆ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಸಿಪಿಐ ಕರೆಪ್ಪ ಬನ್ನೆ, ಪಿಎಸ್‌ಐ ನೇತ್ರಾವತಿ ಪಾಟೀಲ, ಮಹಿಳಾ ಪಿಎಸ್‌ಐ ಎನ್.ಎಸ್.ಘಂಟಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net