ಮೈಸೂರಿನಲ್ಲಿ ಮನೆ ಬಾಗಿಲು ಮೀಟಿ 11.5 ಲಕ್ಷ ರೂ.ಮೌಲ್ಯದ ನಗದು, ಚಿನ್ನಾಭರಣ ಕಳವು

cash jan 22 2020
Published on

ಮೈಸೂರು: ನಗರದ ಸಾತಗಳ್ಳಿಯ ಡಿಟಿಎಸ್ ರಾವ್ ನಗರದಲ್ಲಿ ಗುರುವಾರ ಮನೆ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು 11.5 ಲಕ್ಷ ರೂ. ವೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.

ಸಾತಗಳ್ಳಿಯ ಡಿಟಿಎಸ್ ರಾವ್ ನಗರದ ನಿವಾಸಿ ಸುನೀಲ್ ಎಸ್. ಶೆಟ್ಟಿ ಮನೆಯಲ್ಲಿ ಕಳವು ನಡೆದಿದೆ. ಸುನೀಲ್ ಎಸ್. ಶೆಟ್ಟಿ ಕಾರ್ಯನಿಮಿತ್ತ ಹೊರ ಹೋಗಿದ್ದ ಸಂದರ್ಭವನ್ನು ನೋಡಿಕೊಂಡು ಕಳ್ಳರು ಮನೆಯನ್ನು ಕಳವು ಮಾಡಿದ್ದಾರೆ. ಬೀರುವಿನದಲ್ಲಿದ್ದ 7.5 ಸಾವಿರ ರೂ. ನಗದು, 227 ಗ್ರಾಂ ಚಿನ್ನಾಭರಣ ಕಳುವಾಗಿದೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ಸಾಗಾಟ, ವ್ಯಕ್ತಿ ಬಂಧನ: ಅಕ್ರಮವಾಗಿ ಮದ್ಯ ಸಾಗಟ ಮಾಡುತ್ತಿದ್ದ ವ್ಯಕ್ತಿಯನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ತಾಲೂಕಿನ ಉದ್ಬೂರು ನಿವಾಸಿ ಸಿ.ಚನ್ನಪ್ಪ ಬಂಧಿತ ಆರೋಪಿ. ಈತ ಸ್ಕೂಟರ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯಿಂದ 38 ಟೆಟ್ರಾಪ್ಯಾಕೆಟ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net