

ಮಹಾರಾಷ್ಟ್ರ ಮೂಲದ ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಕಳ್ಳತನ ಮಾಡಿದ ಪ್ರಕರಣದ ಆರೋಪಿಗಳ ಪೈಕಿ ಓರ್ವನ ಮನೆ ಕೇಪು ಕಲ್ಲಂಗಳದಲ್ಲಿದ್ದು, ಮಂಗಳವಾರ ಕಾರವಾರ ಪೊಲೀಸರು ವಿಟ್ಲ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಿದ್ದಾರೆ.
ಅಂಕೋಲಾ ರಾಮನಗುಳಿ ರಾಷ್ಟ್ರೀಯ ಹೆದ್ದಾರಿ ೬೩ರ ಬಳಿ ಅನುಮಾನಾಸ್ಪದವಾಗಿ ಪತ್ತೆಯಾದ ಕಾರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ೧.೧೫ ಕೋಟಿ ರೂ. ಪತ್ತೆಯಾಗಿತ್ತು. ಕೆಲವು ದಿನಗಳ ಬಳಿಕ ಬಂಗಾರ ಉದ್ಯಮಿ ೨.೯೫ ಕೋಟಿ ರೂ.ನಲ್ಲಿ ೧.೮೦ ಕೋಟಿ ರೂ.ಗಳನ್ನು ಅಪರಿಚಿತರು ಬೆದರಿಸಿ ದರೋಡೆ ಮಾಡಿದ ಬಗ್ಗೆ ದೂರು ನೀಡಿದ್ದರು.
ಈ ಪ್ರಕರಣ ಸಂಬಂಽಸಿದಂತೆ ಒಟ್ಟು ೧೧ ಮಂದಿ ಭಾಗಿಯಾದ ಬಗ್ಗೆ ಶಂಕೆ ಮೇರೆಗೆ ಪೊಲೀಸ್ ಇಲಾಖೆ ತನಿಖೆಗೆ ಮುಂದಾಗಿದ್ದು, ೮ ಮಂದಿಯನ್ನು ಬಂಽಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯದ ಬಳಿಕ ೩ ಮಂದಿ ವಿದೇಶಕ್ಕೆ ಪಲಾಯನ ಮಾಡಿದ್ದು, ಇದರಲ್ಲಿ ಕೇಪು ಕಲ್ಲಂಗಳ ನಿವಾಸಿ ಮಹಮ್ಮದ್ ಇಸಾಮ್ ಓರ್ವನಾಗಿದ್ದಾನೆ.
ಇಸಾಮ್ ಮನೆಯನ್ನು ಪೊಲೀಸರು ಸರ್ಚ್ ವಾರೆಂಟ್ ಮೇಲೆ ಪರಿಶೀಲನೆ ನಡೆಸಿ ಮಾಹಿತಿಗಾಗಿ ತಡಕಾಡಿದ್ದಾರೆ. ೨ ತಾಸಿಗೂ ಅಽಕ ಕಾಲ ತನಿಖೆ ನಡೆಸಿದ್ದಾರೆಂಬ ಮಾಹಿತಿಯಿದೆ. ಮನೆಯವರ ಜತೆಗೆ ಸಂಪರ್ಕ ಹಾಗೂ ಆತನ ವಿವಿಧ ಮಾಹಿತಿಯನ್ನು ಈ ಸಂದರ್ಭ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
೩ ವಾಹನಗಳಲ್ಲಿ ಪೊಲೀಸರು ಕಾರವಾರದಿಂದ ವಿಟ್ಲ ಸಮೀಪದ ಕಲ್ಲಂಗಳಕ್ಕೆ ಆಗಮಿಸಿದ್ದಾರೆ. ವಿಟ್ಲ ಪೊಲೀಸರ ಸಹಕಾರ ಪಡೆದುಕೊಂಡು ಸ್ಥಳಕ್ಕೆ ತೆರಳಿದ್ದಾರೆ. ಕಲ್ಲಡ್ಕ ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ಬದಿಯಲ್ಲೇ ಮನೆಯಿದ್ದು, ಆತನ ತಂದೆ ವಿಟ್ಲದಲ್ಲಿ ಟೂರ್ ಟ್ರಾವೆಲ್ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದಾರೆ.