

ಕಾರವಾರ: ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಿಕ್ಕ ಭಾರಿ ಹಣ ತುಂಬಿದ ಕಾರು (Cash in car )ಮಂಗಳೂರು ಮೂಲದ್ದು ಎಂದು ತಿಳಿದುಬಂದಿದ್ದು, ಪೊಲೀಸರು ಮಂಗಳೂರಿಗೆ ತೆರಳಿ ತನಿಖೆ ನಡೆಸಿದ್ದಾರೆ. ಮಂಗಳವಾರ ಅಂಕೋಲಾ ರಾಮನಗುಳಿ ಬಳಿ ರಾಷ್ಟ್ರೀಯ ಹೆದ್ದಾರಿ 63 ರಿಂದ ಸುಮಾರು 15 ಮೀಟರ್ ಒಳಗೆ ಖಾಲಿ ಜಾಗದಲ್ಲಿ ಬಿಳಿ ಬಣ್ಣದ ಹ್ಯುಂಡೈ ಕ್ರೆಟಾ ಕಾರು ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬAದಿತ್ತು. ಅಂಕೋಲಾ ಪೊಲೀಸರು ಅದನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಾಗ ಅದರಲ್ಲಿ 100, 500 ಹೀಗೆ ವಿವಿಧ ಮುಖ ಬೆಲೆಯ ಒಟ್ಟು, 1,14,99,500 ರೂ. ನಗದು ಹಣ ಪತ್ತೆಯಾಗಿತ್ತು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾರನ್ನು ಸೀಜ್ ಮಾಡಲಾಗಿತ್ತು. ಹವಾಲಾ ಹಣ ಸಾಗಣೆ ಶಂಕೆ ವ್ಯಕ್ತವಾಗಿದ್ದರಿಂದ (Cash in car) ಪ್ರಕರಣವನ್ನು ಕಾರವಾರ ಸೈಬರ್ ಆ್ಯಂಡ್ ಇಕನಾಮಿಕ್ ಸೆಲ್ (ಸಿಇಎನ್) ಠಾಣೆಗೆ ಹಸ್ತಾಂತರಿಸಲಾಗಿದೆ. ತನಿಖೆಗೆ ತಂಡವೊಂದನ್ನು ರಚಿಸಲಾಗಿದೆ. ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಎಸ್ಪಿ ಎಂ. ನಾರಾಯಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಂಕೋಲಾದಲ್ಲಿ ಸಿಕ್ಕ ಕಾರಿನ ಮೇಲೆ ಕೆಎ, 51, ಎಂಬಿ-9634 ಎಂಬ ನೋಂದಣಿ ಸಂಖ್ಯೆ ಬರೆದುಕೊಂಡಿತ್ತು. ಆದರೆ, ಆ ನೋಂದಣಿ ಸಂಖ್ಯೆ ಚಿಕ್ಕಮಗಳೂರು ಆರ್ಟಿಒ ಕಚೇರಿಗೆ ಸೇರಿದ ಟಾಟಾ ಅಲ್ಟರೋಜ್ ಕಾರಿನ ನೋಂದಣಿ ಸಂಖ್ಯೆಯಾಗಿತ್ತು. ಕಾರಿನಲ್ಲಿ ಇನ್ನೂ ಎರಡು ನಂಬರ್ ಪ್ಲೇಟ್ಗಳು ಸಿಕ್ಕಿವೆ.
ಅದರಲ್ಲಿ ಕೆಎ-19, ಎಂಟಿ 1036 ನಂಬರ್ ಪ್ಲೇಟ್ ಹಾಗೂ ಚಾಸಿ ಸಂಖ್ಯೆಗೆ ಹೊಂದಾಣಿಕೆಯಾಗುತ್ತಿದೆ. ಆ ಕಾರು ಮಂಗಳೂರಿನ ರಾಜೇಶ ಪವಾರ್ ಅವರ ಸೇರಿನಲ್ಲಿ ಮಂಗಳೂರು ಆರ್ಟಿಒದಲ್ಲಿ ನೋಂದಣಿಯಾಗಿದೆ.
ನೋಂದಣಿ ದಾಖಲೆಗಳ ಆಧಾರದ ಮೇಲೆ ಅವರ ಮೊಬೈಲ್ ಸಂಖ್ಯೆ ಪಡೆದುಕೊಂಡು ಕರೆ ಮಾಡಿದರೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಇದರಿಂದ ಪೊಲೀಸರು ನೋಂದಣಿಯಲ್ಲಿರುವ ವಿಳಾಸಕ್ಕೆ ತೆರಳಿದ್ದು, ಅಲ್ಲಿಯೂ ಅವರು ಪತ್ತೆಯಾಗಿಲ್ಲ ಎನ್ನಲಾಗಿದೆ.
ಕಾರಿನ ಸೀಟಿನಡಿ ಕಬ್ಬಿಣದ ಪೆಟ್ಟಿಗೆಯೊಂದನ್ನು ಮಾಡಿ ಹಣವನ್ನು ಅದರಲ್ಲಿ ಇಡಲಾಗಿತ್ತು. ಕಾರನ್ನು ಸಾಕಷ್ಟು ಮಾಡಿಫೈ ಮಾಡಿದ್ದು, ಕಂಡುಬAದೆ. ಎಂದರೆ ಕಾರಿನಲ್ಲಿ ಕಾಯಮಾಗಿ ಹಣ ಸಾಗಿಸಲಾಗುತ್ತಿತ್ತೇ ಎಂಬ ಅನುಮಾನ ಮೂಡಿದೆ. ಪೊಲೀಸ್ ವಾಹನ ನೋಡಿ ಅಥವಾ ಹಣ ಸಾಗಿಸುವವರಲ್ಲೇ ಗಲಾಟೆ ನಡೆದು ಕಾರನ್ನು ಬಿಟ್ಟೋಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹೆದ್ದಾರಿ ಪಕ್ಕದ ಎಲ್ಲ ಸಿಸಿ ಕ್ಯಾಮರಾಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಎಂ.ನಾರಾಯಣ ಎಸ್ಪಿಕಾರನ್ನು ವಶಕ್ಕೆ ಪಡೆದು, ಕೆಪಿ ಆ್ಯಕ್ಟ್ನಂತೆ ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ಮಾಡಲಾಗಿದೆ. ಆ ಸಂದರ್ಭದಲ್ಲಿ ಹಣ ಪತ್ತೆಯಾಗಿದ್ದು, ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿ ಹಣ ಜಪ್ತು ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಹಣ ಕಾನೂನುಬದ್ಧವಾಗಿದೆಯೇ ಇಲ್ಲವೇ ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆ ಖಚಿತಪಡಿಸಲಿದೆ. ಪ್ರಕರಣವನ್ನು ಸಿಇಎನ್ ಠಾಣೆಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: https://www.vijayavani.net/30-dead-60-injured-in-mahakumbh-mela-stampede-says-up-top-cop https://www.vijayavani.net/30-dead-60-injured-in-mahakumbh-mela-stampede-says-up-top-cop https://www.youtube.com/watch?v=z51mdMzkBMI https://www.youtube.com/watch?v=z51mdMzkBMI