

ಸಿರವಾರ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ ಆಯೋಜಿಸಲಾಗಿತ್ತು.
ಪಿಎಸ್‌ಐ ಗುರುಚಂದ್ರ ಯಾದವ್ ಮಾತನಾಡಿ, ಜನರಿಗೆ ಕಾನೂನಿನ ಮಾಹಿತಿ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಕಾನೂನಾತ್ಮಕ ಸಮಸ್ಯೆಗಳನ್ನು ಠಾಣೆಗೆ ಆಗಮಿಸಿ ಬಗೆಹರಿಸಿಕೊಳ್ಳಬೇಕು. ವಿನಾಕಾರಣ ಅಮಾಯಕರ ವಿರುದ್ಧ ಪ್ರಕರಣಗಳು ದಾಖಲಾಗದಂತೆ ನೋಡಿಕೊಳ್ಳೋಣ. ಶಾಂತಿ ಕದಡುವ ಘಟನೆಗಳು ನಡೆಯದಂತೆ ಸಮುದಾಯಗಳ ಪ್ರಮುಖರು ನಿಗಾ ವಹಿಸಬೇಕು. ಯಾವುದೇ ಸಮುದಾಯದವರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಮುಖರಾದ ಅರಳಪ್ಪ ಯದ್ದಲದಿನ್ನಿ, ಅಬ್ರಹಾಂ ಹೊನ್ನಟಗಿ, ಮಲ್ಲಪ್ಪ ಕಜ್ಜಿ, ಸವಾರಪ್ಪ, ಚನ್ನಬಸವ ಗಡ್ಲ್, ಹನುಮಂತ, ಹುಲಿಗೆಪ್ಪ ಕರಿಬಿಲ್ಕರ್ ಇದ್ದರು.