ಸಂಧಾನದಿಂದ ಪ್ರಕರಣ ಇತ್ಯರ್ಥ

14RAIBAG1
Published on

ರಾಯಬಾಗ: ವ್ಯಾಜ್ಯಗಳನ್ನು ಸಂಧಾನ ಮೂಲಕ ಬಗೆಹರಿಸಿಕೊಂಡು ನೆಮ್ಮದಿ ಜೀವನ ನಡೆಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.

ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬೃಹತ್​ ಲೋಕ ಅದಾಲತ್​ದಲ್ಲಿ ಮಾತನಾಡಿ, ಈ ಬಾರಿ ಲೋಕ ಅದಾಲತ್​ನಲ್ಲಿ ಸಿವಿಲ್​ ಮತ್ತು ಕ್ರಿಮಿನಲ್​ ಸೇರಿ ಒಟ್ಟು 1962 ಪ್ರಕರಣ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.

ವಕೀಲ ಜಿ.ಎಸ್​.ಪವಾರ, ಎಂ.ಎಂ.ಚಿಂಚಲಿಕರ, ಬಿ.ಎಲ್​.ಕೋಳಿಗುಡ್ಡ, ವಿ.ಪಿ.ಮಿರ್ಜೆ, ಎಸ್​.ಆರ್​.ಮಾಂಗ, ಎಸ್​.ಪಿ.ಕಾಂಬಳೆ, ಎಸ್​.ವಿ. ಪೂಜಾರಿ, ಎಂ.ಬಿ.ಬಂತಿ, ಆನಂದ ಬೈಲಪತ್ತಾರ, ಪಿ.ಆರ್​.ಕಡಟ್ಟಿ, ಶ್ರೀದೇವಿ ನಾಯಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net