

ರಾಯಚೂರು ಮಹಾನಗರ ಪಾಲಿಕೆ ಸದಸ್ಯ ಜಿಂದಪ್ಪರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಪಾಲಿಕೆ ಸದಸ್ಯೆ ಅನಿತಾ ಅವರ ಪತಿ ತಿಮ್ಮಾರೆಡ್ಡಿ ಸೇರಿ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಜಮೀನು ವಿಚಾರವಾಗಿ ಸೆ.23 ರಂದು ಮಹಾನಗರ ಪಾಲಿಕೆ ಅಧ್ಯಕ್ಷರ ಕಚೇರಿಯಲ್ಲಿ ಪಾಲಿಕೆ ಸದಸ್ಯ ಜಿಂದಪ್ಪ ಹಾಗೂ ವಾರ್ಡ್ 7 ರ ಮಹಿಳಾ ಸದಸ್ಯೆ ಅನಿತಾರ ಪತಿ ತಿಮ್ಮರೆಡ್ಡಿ ನಡುವೆ
ಮಾತಿಗೆ ಮಾತು ಸೇರಿ ಜಗಳ ವಿಕೋಪಕ್ಕೆ ತೆರಳಿ ತಿಮ್ಮರೆಡ್ಡಿ ಮತ್ತು ಅತನ 8 ಜನ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಹಲ್ಲೆಗೆ ಒಳಗಾದ ಜಿಂದಪ್ಪ ನೀಡಿದ ದೂರಿನ ಮೇರೆಗೆ ನಗರದ ಸದರ್ ಬಜಾರ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.