

ಬೆಂಗಳೂರು: ಕರೊನಾದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಮೃತದೇಹ ಕೊಡಲು ನಿರಾಕರಿಸಿದ ಚನ್ನಸಂದ್ರದ ಪಾತ್ ವೇ ಆಸ್ಪತ್ರೆ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರ್‌ಆರ್‌ನಗರದ ನಿವಾಸಿ ಗೀತಾ ನೀಡಿದ ದೂರಿನ ಆಧಾರದ ಮೇಲೆ ಚೆನ್ನಸಂದ್ರದಲ್ಲಿರುವ ಪಾತ್ ವೇ ಆಸ್ಪತ್ರೆ ವಿರುದ್ಧ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ಮೇ 17ರಂದು ಗೀತಾ ಬಾಮೈದ ಲಕ್ಷ್ಮೀನಾರಾಯಣ್ ಅವರಿಗೆ ರ‌್ಯಾಪಿಡ್ ಟೆಸ್ಟ್‌ನಲ್ಲಿ ಕರೊನಾ ಪಾಸಿಟಿವ್ ಬಂದಿತ್ತು. ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅದೇ ದಿನ ಸಂಜೆ 4.30ರಲ್ಲಿ ಇವರನ್ನು ಪಾತ್‌ವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಲಿಸದೇ ಮೇ 27ರಂದು ಸಂಜೆ 7 ಗಂಟೆಗೆ ಲಕ್ಷ್ಮೀನಾರಾಯಣ್ ಮೃತಪಟ್ಟಿದ್ದರು. ಇದುವರೆ ಇವರ ಚಿಕಿತ್ಸೆಗಾಗಿ 4.5 ಲಕ್ಷ ರೂ. ಶುಲ್ಕವನ್ನು ಆಸ್ಪತ್ರೆಗೆ ಪಾವತಿಸಲಾಗಿತ್ತು. ಆದರೆ, ಆಸ್ಪತ್ರೆ ವೈದ್ಯರು ಹಾಗೂ ಆಡಳಿತ ಮಂಡಳಿಯವರು ಲಕ್ಷ್ಮೀನಾರಾಯಣ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೇ ಉಳಿದ 3.67 ಲಕ್ಷ ರೂ. ಬಿಲ್ ಪಾವತಿಸಿದ ಮೇಲೆ ನೀಡಲಾಗುವುದು ಎಂದು ಹೇಳಿದ್ದರು.
ಬಿಲ್ ಪಾವತಿಸಸಿದ್ದರೆ ಮೃತದೇಹ ಕೊಡಲ್ಲ
ಸದ್ಯಕ್ಕೆ ನಮ್ಮ ಬಳಿ ದುಡ್ಡಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಗೆ ಹೇಳಿದ್ದರು. ದುಡ್ಡು ಕಟ್ಟುವ ಯೋಗ್ಯತೆ ಇಲ್ಲದಿದ್ದರೆ ಏಕೆ ನಮ್ಮ ಆಸ್ಪತ್ರೆಗೆ ಸೇರಿಸುತ್ತೀರಿ ? ಬಾಕಿ ಹಣ ಪಾವತಿಸದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಆಸ್ಪತ್ರೆ ಸಿಬ್ಬಂದಿ ಬೆದರಿಸಿದ್ದಾರೆ. ನಂತರ ನನ್ನ ಬಾಮೈದ ವಿನಯ್‌ನನ್ನು ಹಿಡಿದು ಆಸ್ಪತ್ರೆಯಲ್ಲಿ ಕೂರಿಸಿಕೊಂಡು, ಬಿಲ್ ಪಾವತಿಸುವವರೆಗೂ ಆಸ್ಪತ್ರೆಯಿಂದ ಹೊರಗೆ ಕಳಿಸುವುದಿಲ್ಲ ಎಂದು ಹಿಡಿದಿಟ್ಟುಕೊಂಡಿದ್ದರು ಎಂದು ಗೀತಾ ದೂರಿನಲ್ಲಿ ಆರೋಪಿಸಿದ್ದಾರೆ.
ಬಾಕ್ಸ್....
ಪೊಲೀಸರಿಂದ ಮೃತದೇಹ ಹಸ್ತಾಂತರ
ಮೃತಪಟ್ಟ ಮೇಲೆ ಉಳಿಕೆ ಹಣಕ್ಕೆ ಒತ್ತಾಯ ಮಾಡಬಾರದು ಎಂದು ಸರ್ಕಾರಿ ಆದೇಶವಿದ್ದರೂ ಪಾತ್ ವೇ ಆಸ್ಪತ್ರೆಯ ವೈದ್ಯರು ಮತ್ತು ಆಡಳಿತ ಮಂಡಳಿಯವರು ಹಣ ಕಟ್ಟುವಂತೆ ಬೇಡಿಕೆ ಇಟ್ಟು ಸತಾಯಿಸುತ್ತಿರುವ ಬಗ್ಗೆ ಗೀತಾ ಶುಕ್ರವಾರ ಆರ್‌ಆರ್‌ನಗರ ಪೊಲೀಸರ ಗಮನಕ್ಕೆ ತಂದ ಕೂಡಲೇ ಪೊಲೀಸರು ಆಸ್ಪತ್ರೆಗೆ ಹೋಗಿ ಪರಿಶೀಲಿಸಿದ್ದಾರೆ. ನಂತರ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಲಕ್ಷ್ಮೀನಾರಾಯಣ್ ಮೃತದೇಹವನ್ನು ಪೊಲೀಸರ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.