ಮದ್ಯಪಾನ ಮಾಡಿ ವಾಹನ ಚಾಲನೆ: ಪಿಕಪ್ ಚಾಲಕನ ವಿರುದ್ಧ ಪ್ರಕರಣ ದಾಖಲು

Thirthaprasad
Published on

ಕುಶಾಲನಗರ: ಮಧ್ಯಪಾನ ಮಾಡಿ ಅತೀವೇಗ ಮತ್ತು ಅಜಾಗೂಕತೆಯಿಂದ ವಾಹನ ಚಾಲನೆ ಮಾಡಿ ಬಸ್‌ಗೆ ಡಿಕ್ಕಿಪಡಿಸಿದ ಪಿಕಪ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿಯಾದ ಆರೋಪಿ ತೀರ್ಥಪ್ರಸಾದ್(೫೧) ಎಂಬಾತನನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ತೀರ್ಥಪ್ರಸಾದ್‌ನ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: ೨೮೧, ೧೧೦ ಬಿ.ಎನ್.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

ಜು.೫ ರಂದು ಮಧ್ಯಾಹ್ನ ಸುಮಾರು ೨.೩೦ ಘಂಟೆ ಸಮಯದಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆಹೊಸೂರು, ಸಿದ್ದಾಪುರ ರಸ್ತೆಯ ತೆಪ್ಪದಕಂಡಿ ಸೇತುವೆ ಸಮೀಪ ಕೆಎ೧೨ಸಿ ೪೨೨೦ ವಿವೇಕಾನಂದ ಕಾಲೇಜು ಬಸ್‌ನ ಹಿಂಬದಿಗೆ ಕೆಎ೧೨ಬಿ೮೭೬೨ರ ಮಹೀಂದ್ರಾ ಪಿಕಪ್ ಡಿಕ್ಕಿ ಪಡಿಸಿ ಜಖಂಗೊಂಡಿದ್ದು, ಅಪಘಾತ ಪಡಿಸಿದ ಕೆಎ೧೨ ಬಿ೮೭೬೨ರ ಪಿಕಪ್ ಚಾಲಕನಾದ ತೀರ್ಥಪ್ರಸಾದ್ ಎಂಬಾತನು ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.

ಮಧ್ಯಪಾನ ಮಾಡಿ ರಸ್ತೆಯಲ್ಲಿ ವಾಹನ ಚಲಾಯಿಸುವ ಸಂದರ್ಭ ಅಪಘಾತವಾದಲ್ಲಿ ಜೀವಕ್ಕೆ ಹಾನಿಯುಂಟಾಗುವ ಬಗ್ಗೆ ಅರಿವಿದ್ದರೂ ಸಹ ಮಧ್ಯಪಾನ ಮಾಡಿ ಅತೀವೇಗ ಮತ್ತು ಅಜಾಗೂಕತೆಯಿಂದ ವಾಹನ ಚಾಲನೆ ಮಾಡಿ ಬಸ್‌ಗೆ ಡಿಕ್ಕಿಪಡಿಸಿರುವ ಕೆಎ-೧೨ ಬಿ ೮೭೬೨ ಪಿಕಪ್ ಚಾಲಕನಾದ ತೀರ್ಥಪ್ರಸಾದ್‌ನ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: ೨೮೧, ೧೧೦ ಬಿ.ಎನ್.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net