ಕರ್ತವ್ಯಕ್ಕೆ ಅಡ್ಡಿ ಮಾಜಿ ಶಾಸಕ ಮೊಯ್ದೀನ್ ಬಾವ ವಿರುದ್ಧ ಪ್ರಕರಣ ದಾಖಲು

mng--11 June Moiddin bava
Published on

ಮಂಗಳೂರು : ಮಾಜಿ ಶಾಸಕ ಮೊಯ್ದೀನ್ ಬಾವ ಅವರು ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಪಣಂಬೂರಿನಲ್ಲಿರುವ ನವ ಮಂಗಳೂರು ಬಂದರು ಪ್ರಾಧಿಕಾರದ ಕಚೇರಿಗೆ ನುಗ್ಗಿ (ಎನ್‌ಎಂಪಿಎ) ಸರ್ಕಾರದ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪಣಂಬೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಾಮಗಾರಿಯೊಂದರ ಬಿಲ್ ಪಾಸ್ ಮಾಡುವ ವಿಚಾರದಲ್ಲಿ ಮೊಯ್ದಿನ್ ಬಾವಾ ಅವರು ಜೂನ್ 9ರಂದು ರಾತ್ರಿ ಎಂಟು ಗಂಟೆಗೆ ಎನ್‌ಎಂಪಿಎ ಕಚೇರಿಗೆ ಅಧಿಕಾರಿಗಳೊಂದಿಗೆ ಮಾತನಾಡಲು ಬಂದಿದ್ದು, ಈ ವೇಳೆ ಉಪಾಧ್ಯಕ್ಷರ ಕಚೇರಿಗೆ ನುಗ್ಗಿ ವಾಗ್ವಾದ ನಡೆಸಿದ್ದಾರೆ. ಅವರನ್ನು ಕಚೇರಿಯಿಂದ ಹೊರಗೆ ಹೋಗಲು ಬಿಡದೇ, 15 ನಿಮಿಷ ಕಾಲ ತಡೆದು ನಿಲ್ಲಿಸಿ ಕಿರುಚಾಡಿದ್ದಾರೆ. ನಂತರ ಅಧಿಕಾರಿ ಹೊರಗೆ ಬಂದಾಗಲೂ ಹಿಂಬಾಲಿಸುತ್ತ ಬೆದರಿಕೆ ಹಾಕಿದ್ದಾರೆ.

ಅಧಿಕಾರಿ ಬೇರೆ ಕರ್ತವ್ಯಕ್ಕಾಗಿ ಕಾರಿನಲ್ಲಿ ಹೊರಗಡೆ ತೆರಳಲು ಮುಂದಾಗಿದ್ದ ವೇಳೆಯೂ ಕಾರನ್ನು ತಡೆದು ನಿಲ್ಲಿಸಿ, ಬೈದಾಡಿದ್ದಾರೆ. ಈ ಘಟನೆ ಬಗ್ಗೆ ಎನ್‌ಎಂಪಿಎ ಕಾರ್ಯದರ್ಶಿ ಜೂನ್ 10ರಂದು ಸಂಜೆ ಪಣಂಬೂರು ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 60/2025 ಕಲಂ 224, 221, 132, 126, 127, 226 ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net