ಪ್ರಕರಣಗಳ ಮರುಕಳಿಸದಿರಲು ಮುನ್ನೆಚ್ಚರಿಕೆ

03 Sirwar 2
Published on

ಸಿರವಾರ: ಪೋಲಿಯೋ ಮುಕ್ತ ದೇಶಕ್ಕಾಗಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಆಯುಷ್ ವೈಧ್ಯಾಧಿಕಾರಿ ಸುನೀಲ್ ಸರೋದೆ ಹೇಳಿದರು.

ಪಟ್ಟಣದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಭಾರತ ಈಗಾಗಲೇ ಪೋಲಿಯೋ ಮುಕ್ತವಾಗಿದೆ. ಆದರೆ, ಪೋಲಿಯೋ ಪ್ರಕರಣಗಳು ಮರುಕಳಿಸಬಾರದು ಎಂಬ ಕಾರಣಕ್ಕೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು. ಲಸಿಕೆ ಅಭಿಯಾನ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಸಿಡಿಪಿಒ ನಾಗರತ್ನ ನಾಯಕ, ಪ್ರಮುಖರಾದ ರಮೇಶ ದರ್ಶನಕರ್, ಶಿವಶರಣ ಅರಕೇರಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net