ಮೈಸೂರು: ಹೆಚ್ಚಿನ ಹಣ ನೀಡುವುದಾಗಿ ಆಮಿಷವೊಡ್ಡಿ ಅಮಾಯಕರಿಂದ ಹಣ ಪಡೆದು ವಂಚಿಸುತ್ತಿದ್ದ ಫರ್‌ಫೆಕ್ಟ್ ವೆಂಚರ್ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಚಾಮರಾಜಪುರಂ ವಾಣಿ ವಿಲಾಸ ರಸ್ತೆಯಲ್ಲಿರುವ ಫರ್‌ಫೆಕ್ಟ್ ವೆಂಚರ್ ಎಂಬ ಕಂಪನಿಯವರು ಅಮಾಯಕರಿಗೆ ಹೆಚ್ಚಿಗೆ ಹಣ ನೀಡುವುದಾಗಿ ಆಮಿಷಯೊಡ್ಡಿ ಹಣ ಸಂಗ್ರಹಿಸುತ್ತಿದ್ದರು. ಅಲ್ಲದೆ ಬಳಿಕ ಪಡೆದ ಹಣವನ್ನು ವಾಪಸ್ ನೀಡದೆ ವಂಚಸಿರುವ ಬಗ್ಗೆ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಸಂಬಂಧ ಕಂಪನಿಯ ಸಿಇಒ ವಿರುದ್ಧ ಪ್ರಕರಣ ದಾಖಲಾಗಿದೆ.
ಕಂಪನಿಗೆ ಹಣ ಹೂಡಿಕೆ ಮಾಡಿರುವ ಸಂತ್ರಸ್ತರು ತಮ್ಮ ಬಳಿ ಇರುವ ದಾಖಲಾತಿಗಳೊಂದಿಗೆ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ತಿಳಿಸಿದ್ದಾರೆ.