ಕೊಲೆ ಯತ್ನ ಪ್ರಕರಣ; ರೌಡಿಶೀಟರ್ ಕಾಲಿಗೆ ಗುಂಡೇಟು

saifulla khan
ರೌಡಿಶೀಟರ್ ಸೈಫುಲ್ಲಾ ಖಾನ್.
Published on

ಶಿವಮೊಗ್ಗ: ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಕಾಲಿಗೆ ಜಯನಗರ ಠಾಣೆ ಪೊಲೀಸರು ಸೋಮವಾರ ಆಯನೂರು ಸಮೀಪ ಗುಂಡು ಹಾರಿಸಿ ಬಂಧಿಸಿದ್ದಾರೆ.

ರೌಡಿಶೀಟರ್ ಸೈಫುಲ್ಲಾ ಖಾನ್ ಅಲಿಯಾಸ್ ಸೈಫು ಎಂಬಾತನ ಮೇಲೆ ಫೈರಿಂಗ್ ಮಾಡಿದ್ದು ಕಾಲಿಗೆ ಗುಂಡು ತಗುಲಿದೆ. ಈತನ ಮೇಲೆ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲೇ 16, ತುಂಗಾನಗರ ಮತ್ತು ಜಯನಗರ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣಗಳಿವೆ.
ಜಯನಗರ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ. ಆಯನೂರು ಸಮೀಪದ ದೊಡ್ಡದಾನವಂದಿ ಅರಣ್ಯದ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಯನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದರು.
ಪಿಎಸ್‌ಐ ನವೀನ್ ಅವರು ಶರಣಾಗತಿ ಆಗುವಂತೆ ಕೇಳಿಕೊಂಡಿದ್ದರು. ಆದರೆ ಇದಕ್ಕೆ ನಿರಾಕರಿಸಿದ ಸೈಫು, ಸಿಬ್ಬಂದಿ ನಾಗರಾಜ್ ಮೇಲೆ ದಾಳಿ ಮಾಡಿದ್ದ. ಹಾಗಾಗಿ ನಾಗರಾಜ್ ಅವರ ಪ್ರಾಣ ರಕ್ಷಣೆಗಾಗಿ ಪಿಎಸ್‌ಐ ನವೀನ್, ಆರೋಪಿ ಸೈಫು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಗಾಯಾಳುವನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಫು ಗೂಂಡಾ ಕಾಯ್ದೆಯಡಿ ಜೈಲಿನಲ್ಲಿರುವ ಮಾರ್ಕೆಟ್ ಫೌಝಾನ್ ಗ್ಯಾಂಗ್‌ನ ಸದಸ್ಯ ಕೂಡ ಆಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net