ಪೊಲೀಸರ ಮುಂದೆ ಧಿಮಾಕು, ದಾಖಲಾಯ್ತು ಕರ್ತವ್ಯಕ್ಕೆ ಅಡ್ಡಿ ಕೇಸ್

Police
Published on


ಕೋಟ: ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟ ಮೂರುಕೈ ಸಮೀಪ ನಡೆದಿದೆ.

ಠಾಣಾ ಉಪನಿರೀಕ್ಷಕ ಮಧು ಬಿ.ಇ. ತಮ್ಮ ಸಿಬ್ಬಂದಿ ಜತೆ ವಾಹನ ತಪಾಸಣೆ ವೇಳೆ ಸಾಲಿಗ್ರಾಮ ಕಡೆಯಿಂದ ಕೋಟ ಕಡೆಗೆ ಸ್ಕೂಟಿಯಲ್ಲಿ ಮೂವರು ಯುವಕರು ತ್ರಿಬಲ್ ರೈಡ್‌ನಲ್ಲಿದ್ದು, ಸವಾರ ಹೆಲ್ಮೆಟ್ ಕೂಡ ಧರಿಸದೇ ವೇಗವಾಗಿ ಬರುತ್ತಿರುವುದನ್ನು ಕಂಡು ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರು.

ಆದರೆ, ಸವಾರ ಸ್ಕೂಟಿಯನ್ನು ನಿಲ್ಲಿಸದೆ ವೇಗವಾಗಿ ಬಂದು ವಾಹನ ತಪಾಸಣೆ ಮಾಡುತ್ತಿದ್ದವರ ಮೈಮೇಲೆ ಎರಗುವಂತೆ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾಹನ ನಿಲ್ಲಿಸದೆ ಹೋಗಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net