

ಹುಬ್ಬಳ್ಳಿ: ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ನೇಮಕಾತಿಗಾಗಿ 2019ರಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್, ಮೈಕ್ರೋಪೋನ್ ಬಳಸಿ ಅಕ್ರಮ ಎಸಗಿದ 6 ಜನರ ವಿರುದ್ಧ ಇಲ್ಲಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ, ಹಾವೇರಿ ಮೂಲದವರಾದ ನಿಖಿತಾ, ಅಶೋಕ, ಮಾರುತಿ, ಲಕ್ಷ್ಮಣ, ಶಿವಲಿಂಗ, ಅಪ್ಪಯ್ಯ ಎಂಬುವರ ಮೇಲೆ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.