

ಕಲಬುರಗಿ: ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಸಾವಿಗೆ ಕಾರಣರಾಗಿದ್ದಾರೆ ಎಂದು ನಗರದ ಡಾ.ಮಂಗಳಾ ಹರವಾಳ ಮತ್ತು ಡಾ.ಮೀತಾ ಹರವಾಳ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಸನೂರು ಗ್ರಾಮದ ಸಿದ್ರಾಮ ಶಿವಶರಣಪ್ಪಾ ಬರಗಾಲಿ ದೂರು ದಾಖಲು ಮಾಡಿದ್ದಾರೆ. ದೂರುದಾರ ತನ್ನ ತಾಯಿಯನ್ನು ಗರ್ಭಕೋಶದ ಸಮಸ್ಯೆ ಇರುವ ಕಾರಣ ನ.3ರಂದು ಲಾಲಗಿರಿ ಕ್ರಾಸ್‌ನಲ್ಲಿರುವ ಹರವಾಳ ಆಸ್ಪತ್ರೆಗೆ ಸೇರಿಕೆ ಮಾಡಿದ್ದರು. ನ.4ರಂದು ಬೆಳಗ್ಗೆ ಶಸ ಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದರು. ಮತ್ತೆ ನ.4ರಂದು ಬೆಳಗ್ಗೆ ಡಾ.ಮಂಗಳಾ ಹರವಾಳ ಅವರುಗಳಿಗೆ ಭೇಟಿ ಮಾಡಿ ಕೇಳಿದಾಗ ‘ಸ್ವಲ್ಪ ಸಮಯ ಕಾಯಿರಿ ಡಾ.ಮೀತಾ ಹರವಾಳ ಅವರು ಬಂದ ಮೇಲೆ ನಾವು ವಿಚಾರ ಮಾಡಿಕೊಂಡು ಆಪರೇಶನ ಮಾಡುವುದಾಗಿ ತಿಳಿಸಿದರು’. ನಂತರ ಮೀತಾ ಹರವಾಳ ಬಂದ ಕೂಡಲೇ ಯಾವುದೇ ಮಾಹಿತಿ ನೀಡದೆ ತಾಯಿಯನ್ನು ಶಸ ಚಿಕಿತ್ಸೆ ಕೋಣೆಗೆ ಕೊಂಡೊಯ್ಯದರು. ನಂತರ 9.30ರ ವೇಳೆಗೆ ‘ನಿಮ್ಮ ತಾಯಿಯ ಆಪರೇಷನ್ ಮಾಡಲು ಸಾಧ್ಯವಾಗುತ್ತಿಲ್ಲಘಿ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗು’ ಎಂದು ಹೇಳಿದ್ದಾರೆ. ಆ ವೇಳೆ ತಾಯಿ ಪ್ರಜ್ಞೆ ತಪ್ಪಿದ್ದಳು. ಮುಂದೆ ಅಂಬುಲೆನ್ಸ್ ಮುಖಾಂತರ ಹಾರ್ಟ್ ೌಂಡೇಶನ ಆಸ್ಪತ್ರೆಗೆ ದಾಖಲಿ ಮಾಡಿದ್ದೇವು. ಆದರೆ, ನ.5ರಂದು ರಾತ್ರಿ 10 ನಮ್ಮ ತಾಯಿ ಮೃತಪಟ್ಟಿದ್ದಾಳೆ ಎಂದು ಹಾರ್ಟ್ ೌಂಡೇಶನ ಆಸ್ಪತ್ರೆ ವೈದ್ಯರು ತಿಳಿಸಿದರು. ಇದಕ್ಕೆ ಡಾ.ಮಂಗಳಾ ಹರವಾಳ ಮತ್ತು ಡಾ.ಮೀತಾ ಹರವಾಳ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.