ವಾಟಾಳ್ ನಾಗರಾಜ್ ವಿರುದ್ಧ ಕೇಸ್: ಮಾಡಿದ್ದೇನು ಗೊತ್ತಾ?

VatalNagaraj
Published on

ಬೆಂಗಳೂರು: ಕ್ಯಾಪಿಟಲ್ ಹೋಟೆಲ್ ನಾಮಫಲಕಕ್ಕೆ ಹಾನಿ ಮಾಡಿದ ಆರೋಪದಡಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಸೇರಿ ಇತರರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಟೆಲ್​ನ ಭದ್ರತಾ ಅಧಿಕಾರಿ ಷಣ್ಮುಗಂ ಸುಂದರಂ ಭಾನುವಾರ ದೂರು ನೀಡಿದ್ದರು. ಫೆ.29ರ ಮಧ್ಯಾಹ್ನ 1 ಗಂಟೆಗೆ ಕ್ಯಾಪಿಟಲ್ ಹೋಟೆಲ್​ಗೆ ವಾಟಾಳ್ ನಾಗರಾಜ್ ಮತ್ತು 15 ಮಂದಿ ಅತಿಕ್ರಮ ಪ್ರವೇಶ ಮಾಡಿದ್ದರು. ತಡೆಯಲು ಹೋದಾಗ ಸೆಕ್ಯೂರಿಟಿ ಗಾರ್ಡ್​ಗಳನ್ನು ತಳ್ಳಿ ದೊಣ್ಣೆ ಮತ್ತು ಕಲ್ಲುಗಳಿಂದ ಹೋಟೆಲ್ ಕಾಂಪೌಂಡ್ ಮೇಲೆ ಅಳವಡಿಸಿದ 8 ಲಕ್ಷ ರೂ. ಬೆಲೆ ಬಾಳುವ ನಾಮಫಲಕಕ್ಕೆ ಹಾನಿ ಉಂಟು ಮಾಡಿದ್ದಾರೆ. ಕರ್ತವ್ಯ ನಿರತ ಸೆಕ್ಯೂರಿಟಿ ಗಾರ್ಡ್​ಗಳಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಷಣ್ಮುಗಂ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net