ಮೂವರ ವಿರುದ್ಧ ಪ್ರಕರಣ

crime
Published on

ಹುಬ್ಬಳ್ಳಿ: ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಹೋರಿಕರ ಮತ್ತು ಆಕಳು ಕರು ರಕ್ಷಣೆ ಮಾಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು, ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಧಾರವಾಡದ ಮೈನುದ್ದೀನ ಗೋಡೆವಾಲೆ, ಫಿರೋಜ್ ಬೇಪಾರಿ, ಇಮ್ರಾನ್ ಬೇಪಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶರೆವಾಡ-ಬೆಟದೂರ ರಸ್ತೆಯ ಛಬ್ಬಿ ಗ್ರಾಮದ ಹತ್ತಿರ ಗೂಡ್ಸ್ ವಾಹನದಲ್ಲಿ ಹಸುಗಳನ್ನು ಸಾಗಿಸುತ್ತಿದ್ದಾಗ ದಾಳಿ ಮಾಡಿ ಹೋರಿಕರ ಮತ್ತು ಆಕಳು ಕರು ರಕ್ಷಣೆ ಮಾಡಲಾಗಿದೆ. ವಾಹನ ಸೇರಿ 1.18 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net