

ಗೋಕರ್ಣ: ಗಾಂಜಾ ಸೇವನೆ ಸಂಬಂಧ ಸೋಮವಾರ ರಾತ್ರಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಲ್ಲಿನ ಇಬ್ಬರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಮೀನು ಮಾರುಕಟ್ಟೆ ಬಳಿಯ ಶಂಕರ ಗಣಪತಿ ಗೌಡ ಮತ್ತು ಬೇಲೆಹಿತ್ತಲು ದಂಡೆಭಾಗದ ನಾಗು ಗಣಪು ಗೌಡ ಆರೋಪಿಗಳಾಗಿದ್ದಾರೆ.
ಇವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ಪಿಎಸ್ಐ ಖಾದರ ಬಾಷಾ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.