ಮರ ಕಡಿದವರ ವಿರುದ್ಧ ಕೇಸ್

8bhr 1
ಬಾಳೆಹೊನ್ನೂರಿನ ಅನಂತ್ಯ ಶಾಲೆ ಬಳಿ ಮರಗಳನ್ನು ಕಡಿದಿರುವುದು.
Published on

ಬಾಳೆಹೊನ್ನೂರು: ಪಟ್ಟಣದ ಎನ್.ಆರ್.ಪುರ ರಸ್ತೆಗೆ ಹೊಂದಿಕೊಂಡಿರುವ ಜಾಗದಲ್ಲಿ ಬೆಳೆದಿದ್ದ 21 ವಿವಿಧ ಕಾಡು ಜಾತಿಯ ಮರಗಳನ್ನು ಅಕ್ರಮವಾಗಿ ಕಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಎನ್.ಆರ್.ಪುರ ರಸ್ತೆಯ ಅನಂತ್ಯ ಶಾಲೆ ಬಳಿಯ ಸರ್ವೇ ನಂ.137ರಲ್ಲಿ ಬೆಳೆದಿದ್ದ ಚೆರ‌್ರಿ, ಬೆಂಡೆ ಸೇರಿದಂತೆ ಕಾಡು ಜಾತಿಯ 21 ಮರಗಳನ್ನು ಕಡಿದ ಅಬ್ದುಲ್ ಮುನ್ಾ ಹಾಗೂ ನದೀಮ್ ಎಂಬುವವರ ವಿರುದ್ಧ ಪ್ರಕರಣದ ದಾಖಲಿಸಿರುವುದಾಗಿ ಆರ್‌ಎ್ಒ ಸಂದೀಪ್ ತಿಳಿಸಿದ್ದಾರೆ.
ಸೌದೆಯನ್ನು ವಶಪಡಿಸಿಕೊಂಡಿದ್ದು, ಮರ ಕಿತ್ತ ಹಿಟಾಚಿ ವಶಕ್ಕೆ ಕ್ರಮಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಆರ್‌ಎ್ಓ ಮಂಜುನಾಥ್, ಅರಣ್ಯ ರಕ್ಷಕರಾದ ಸಂಜಯ್, ಕಾರ್ತಿಕ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net