

ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ರೈತ ಹೋರಾಟಗಾರ್ತಿ ಮಂಜುಳಾ ಪೂಜಾರ ವಿರುದ್ಧ ಗುತ್ತಿಗೆದಾರರೊಬ್ಬರಿಗೆ ಬ್ಲಾೃಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.
ನೀರಾವರಿ ಇಲಾಖೆ ಗುತ್ತಿಗೆದಾರ ಅರ್ಜುನ ಗುಡ್ಡದ ಅವರಿಗೆ ಬ್ಲಾೃಕ್‌ಮೇಲ್ ಮಾಡುತ್ತಿದ್ದ ರೈತ ಹೋರಾಟಗಾರ್ತಿ ಮಂಜುಳಾ ಪೂಜಾರ ಮತ್ತು ಪತಿ ಜಗದೀಶ ಸಣ್ಣಕ್ಕಿ ಸೇರಿ ನಾಲ್ವರ ವಿರುದ್ಧ ಇಲ್ಲಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಅ. 11ರಂದು ಪ್ರಕರಣ ದಾಖಲಾಗಿದೆ.
ಅರ್ಜುನ ಗುಡ್ಡದ ಅವರ ನಕಲಿ ಫೋಟೋ, ವಿಡಿಯೋ ಸೃಷ್ಟಿಸಿದ್ದ ಮಂಜುಳಾ ಪೂಜಾರ ನೇತೃತ್ವದ ನಾಲ್ವರ ತಂಡ ಬ್ಲಾೃಕ್‌ಮೇಲ್ ಮಾಡುತ್ತಿತ್ತು. 2022 ಅಕ್ಟೋಬರ್‌ನಲ್ಲಿ 20 ಲಕ್ಷ ರೂ. ಸುಲಿಗೆ ಕೂಡ ಮಾಡಿತ್ತು. ನಕಲಿ ದಾಖಲೆ ಇಟ್ಟುಕೊಂಡು ಪದೇ ಪದೆ ಹಣ ಕೊಡುವಂತೆ ಬೇಡಿಕೆ ಇಡುತ್ತಿದ್ದರಿಂದ ರೋಸಿ ಹೋಗಿದ್ದ ಅರ್ಜುನ ಗುಡ್ಡದ, ಮಂಜುಳಾ ಪೂಜಾರ, ಜಗದೀಶ ಸಣ್ಣಕ್ಕಿ, ಹಾವೇರಿ ಮೂಲದ ಹನುಮಂತಪ್ಪ ಬಂಡಿವಡ್ಡರ, ಸಿದ್ದಪ್ಪ ಹೊಸಮನಿ ವಿರುದ್ದ ಬ್ಲಾೃಕ್‌ಮೇಲ್ ಆರೋಪದಡಿ ದೂರು ದಾಖಲಿಸಿದ್ದಾರೆ.