ಫೇಕ್ ಪೋಸ್ಟ್ ವಿರುದ್ಧ ಪ್ರಕರಣ

crime
Published on

ಹುಬ್ಬಳ್ಳಿ: ಹಣ ಕೊಟ್ಟರೆ ಮತ್ತು ಇನ್‌ಸ್ಟಾಗ್ರಾಂ ಪೇಜ್ ಫಾಲೋ ಮಾಡಿದರೆ, ಎಸ್‌ಎಸ್‌ಎಲ್‌ಸಿ ಪತ್ರಿಕೆ ನೀಡುವುದಾಗಿ ಫೇಕ್ ಪೋಸ್ಟ್ ಮಾಡಿದ್ದ 5 ಇನ್‌ಸ್ಟಾಗ್ರಾಂ ಪೇಜ್‌ಗಳ ವಿರುದ್ಧ ಇಲ್ಲಿಯ ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಸ್ವಯಂ (ಸುಮೊಟೊ) ಪ್ರಕರಣ ದಾಖಲಾಗಿದೆ.

ವಿದಾರ್ಥಿಗಳು ಹಾಗೂ ಪಾಲಕರು ಇಂಥ ಪೇಜ್‌ಗಳ ಪೋಸ್ಟ್‌ಗಳನ್ನು ನಂಬಬಾರದು ಎಂದು ಪೊಲೀಸ್ ಆಯಕ್ತ ಎನ್. ಶಶಿಕುಮಾರ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net