

ಕಲಬುರಗಿ: ಎಷ್ಟೆ ವರುಷಗಳು ಕಳೆದರು ಒಂದಲ್ಲ ಒಂದು ದಿನ ಬಾಬರಿ ಮಸೀದಿ ಅಲ್ಲೆ ಕಟ್ಟುತ್ತೇವೆ.ಚೈರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೊಸ್ಟ್ ಮಾಡಿದ ಕಲಬುರಗಿಯ ಯುವಕನು, ಬಾಬರಿ ಮಸೀದಿ ಮರೆಯಲ್ಲ ಹ್ಯಾಶ್ ಟ್ಯಾಗ್ ಮಾಡಿದ್ದ ಟೆಕ್ಕಿ ಸೈಯದ್ ಮೋಹಿನ್ ಫೈಸಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಮುನ್ನಾ ದಿನ ಪೊಸ್ಟ್ ಮಾಡಿದ್ದ. ಸೈಯದ್ ಮೋಹಿನ್ ಫೈಸಲ್ ಎಂಬುವನ ವಿರುದ್ದ ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 153(a)295 , 295(a) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸೈಯದ್ ಮೋಹಿನ್ ಫೈಸಲ್ ನನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.