ಕರುವಿನ ಮೃತದೇಹ ಎಸೆದ ದುಷ್ಕರ್ಮಿಗಳು

Published on

ವಿಟ್ಲ: ಬೋಳಂತೂರು ಮನಲಿತೋಟದಲ್ಲಿ ಮೃತಪಟ್ಟ ಕರುವೊಂದನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮ್ಟೂರು ಕೇದ್ಲ ನಿವಾಸಿ ಹರೀಶ ರಾವ್(೫೦) ಬೋಳಂತೂರು ಗ್ರಾಮದ ಮನಲಿತೋಟ ಎಂಬಲ್ಲಿ ಕೃಷಿ ಜಮೀನು ಹೊಂದಿದ್ದು, ಸೋಮವಾರ ಬೆಳಗ್ಗೆ ೧೦ ಜಮೀನಿಗೆ ಕೃಷಿ ಕೆಲಸದ ಬಗ್ಗೆ ಹೋದಾಗ ಜಮೀನಿನ ಪಕ್ಕದ ರಸ್ತೆಯ ಬದಿಯಲ್ಲಿ ಸುಮಾರು ೫ರಿಂದ ೬ ತಿಂಗಳ ಪ್ರಾಯದ ಕಂದು ಬಣ್ಣದ ಮೃತ ಹೆಣ್ಣು ಕರುವನ್ನು ಭಾನುವಾರ ರಾತ್ರಿ ಯಾರೋ ಎಸೆದು ಹೋಗಿರುವುದು ಕಂಡುಬಂದಿದೆ. ಸ್ಥಳದಲ್ಲಿ ದುರ್ವಾಸಣೆ ಬರುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಜೀವಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net