ಪುತ್ತೂರಿನಲ್ಲಿ ನಿಷೇಧಾಜ್ಞೆ ಉಲ್ಲಂಘನೆ

Published on

ಪುತ್ತೂರು: ನಿಷೇಧಾಜ್ಞೆ ಜಾರಿಯಲ್ಲಿದ್ದ ಸಂದರ್ಭ ಪುತ್ತೂರು ಗಾಂಽಕಟ್ಟೆ ಸಮೀಪ ಪೊಲೀಸ್ ಇಲಾಖೆಯ ಸೂಚನೆ ಉಲ್ಲಂಘಿಸಿ ದೊಂಬಿ ಎಬ್ಬಿಸಿದ ಬಗ್ಗೆ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮೇ ೨ರಿಂದ ೫ರ ಮಧ್ಯರಾತ್ರಿ ೧೨ರ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮೇ ೨ರಂದು ಬೆಳಗ್ಗೆ ೧೧ಕ್ಕೆ ಪುತ್ತೂರು ಗಾಂಽಕಟ್ಟೆಯ ಸಮೀಪ ೨೦ರಿಂದ ೩೦ ಮಂದಿ ಬಸ್ ನಿಲ್ದಾಣ ಬಳಿಯ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುತ್ತಿರುವುದು ಕಂಡುಬಂದಿದೆ. ತಕ್ಷಣ ಇಲಾಖೆ ಅಽಕಾರಿಗಳು ನಿಷೇಧಾಜ್ಞೆ ಮಾಹಿತಿ ನೀಡಿ ಸ್ಥಳದಿಂದ ಚದುರಲು ಸೂಚನೆ ನೀಡಿದರೂ, ಉಲ್ಲಂಘಿಸಿ ದೊಂಬಿ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net