

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶನಿವಾರ ಸಂಜೆ ಮಹಾನವಮಿ ಬಂಡಿ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬ ಬಂಡಿಯ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾನೆ.
ಪ್ರತಿ ವರ್ಷದಂತೆ ದಸರಾ ಪ್ರಯುಕ್ತ ಜೋಡೆತ್ತು ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು. ಮಹಾನವಮಿ ಬಂಡಿ ಪ್ರಮುಖ ಬೀದಿಗಳಲ್ಲಿ ಅತಿ ವೇಗವಾಗಿ ಸಾಗುತ್ತಿದ್ದಾಗ ಬಂಡಿ ಮುಂದಿನ ತುದಿ ಯುವಕನಿಗೆ ರಭಸವಾಗಿ ತಾಗಿ ಕೆಳಗಡೆ ಬಿದ್ದಿದ್ದು,
ಕೂದಲೆಳೆ ಅಂತರದಲ್ಲಿ ಗಾಡಿಯ ಚಕ್ರದಿಂದ ಪಾರಾಗಿದ್ದಾರೆ. ಬಂಡಿ ಮುಂದಕ್ಕೆ ಸಾಗುತ್ತಿದ್ದಂತೆ ಜನರು ಬಂದು ಯುವಕನನ್ನು ಎತ್ತಿ ಪಕ್ಕಕ್ಕೆ ಕರೆದೊಯ್ದಿದ್ದಾರೆ. ಯುವಕನ ಮೊಣಕೈ, ಕಾಲುಗಳಿಗೆ ತರಚಿದ ಗಾಯಗಳಾಗಿವೆ.