ಮಂಗಳೂರು ಶ್ರೀ ವೆಂಕಟರಮಣ ಆಚಾರ್ಯ ಮಠ ಶಾರದೋತ್ಸವದಲ್ಲಿ ಬೆಳಗಿದ ಲಕ್ಷಕ್ಕೂ ಅಧಿಕ ದೀಪಗಳು

lightings
Published on

ಮಂಗಳೂರು: ಶ್ರೀ ವೆಂಕಟರಮಣ ಆಚಾರ್ಯ ಮಠ ಶ್ರೀ ಶಾರದಾ ಶತಮಾನೋತ್ಸವ ಪ್ರಯುಕ್ತ ಶಾರದಾ ಮಾತೆಗೆ ಬುಧವಾರ ಶ್ರೀ ನಾರಾಯಣಿ ಅಲಂಕಾರ ಮಾಡಲಾಗಿತ್ತು.
ಸಮಿತಿ ವತಿಯಿಂದ ಸಂಜೆ ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸಿ ದೇವರಿಗೆ ವಿಶೇಷ ದೀಪಾಲಂಕಾರ ಮಾಡಲಾಯಿತು. 50 ಸಾವಿರ ಲಡ್ಡು ಪ್ರಸಾದ ಭಕ್ತರಿಗೆ ನೀಡಲಾಗಿದೆ. ಶ್ರೀ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ಗುರುವಾರ ರಾತ್ರಿ 10ಕ್ಕೆ ರಥಬೀದಿಯಿಂದ ಹೊರಟು ಗದ್ದಕೇರಿ,ಡೊಂಗರಕೇರಿ, ನ್ಯೂಚಿತ್ರ,ಬಸವನಗುಡಿ ಮೂಲಕ ರಥಬೀದಿ ತಲುಪಿ ವಿಧಿಪೂರ್ವಕವಾಗಿ ಮಹಾಮಾಯ ಕೆರೆಯಲ್ಲಿ ವಿಸರ್ಜಿಸಲಾಗುವುದು.

ಈ ವರ್ಷ ಶತಮಾನದ ಅಂಗವಾಗಿ ವಿಶೇಷ ಹುಲಿವೇಷ, ನಾಸಿಕ್ ಬ್ಯಾಂಡ್, ಸಾಂಪ್ರದಾಯಿಕ ವಾದ್ಯಗಳು ಮತ್ತು ಇತರ ಸಾಂಸ್ಕೃತಿಕ ಟ್ಯಾಬ್ಲೋಗಳು ಭಾಗವಹಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net