

ಮಂಗಳೂರು : ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಆರಾಧ್ಯ ದೇವರಾದ ಶ್ರೀ ವೀರ ವೆಂಕಟೇಶ ದೇವರ ಹಾಗೂ ಪರಿವಾರ ದೇವರುಗಳ ಚಾತುರ್ಮಾಸ ಆಚರಣೆಗೆ ಮಂಗಳವಾರ ವೈದಿಕ ವಿಧಿವಿಧಾನದೊಂದಿಗೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.
ಪ್ರಾತಃ ಕಾಲ ಸಮಸ್ತ ಸಮಾಜಬಾಂಧವ ರೊಂದಿಗೆ ದೇವಳದ ಆಡಳಿತ ಮಂಡಳಿ ಹಾಗೂ ವಿದ್ವತ್ ವೈದಿಕರು ದೇವರ ಸನ್ನಿಧಾನದಲ್ಲಿ ಮಹಾಪ್ರಾರ್ಥನೆ ನಡೆಸಿದ ಬಳಿಕ ದೇವರಿಗೆ ಪಂಚಾಮೃತ , ಗಂಗಾಭಿಷೇಕ ,ಪುಳಕಾಭಿಷೇಕ , ಪವಮಾನಾಭಿಷೇಕ ಹಾಗೂ ಶತ ಕಲಶಾಭಿಷೇಕಗಳು ನೆರವೇರಿದವು.
ಮಧ್ಯಾಹ್ನ ಪೂಜೆ ಬಳಿಕ ಸಮಾರಾಧನೆ ನಡೆಯಿತು . ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ , ಪ್ರಧಾನ ಅರ್ಚಕರಾದ ವೇದಮೂರ್ತಿ ಹರೀಶ್ ಭಟ್ , ವೇದಮೂರ್ತಿ ಚಂದ್ರಕಾಂತ್ ಭಟ್ ತಂತ್ರಿಗಳಾದ ಪಂಡಿತ್ ಕಾಶೀನಾಥ್ ಆಚಾರ್ಯ ಉಪಸ್ಥಿತರಿದ್ದರು .