ಗುಣಮಟ್ಟದ ಕಾಮಗಾರಿ ಕೈಗೊಳ್ಳಿ

almt 13-1
ಆಲಮಟ್ಟಿಯ ರಾಷ್ಟ್ರೀಯ ಹಳೇ ಹೆದ್ದಾರಿ-13ರಿಂದ ಆಲಮಟ್ಟಿ-ನಾರಾಯಣಪುರ ರಾಜ್ಯ ಹೆದ್ದಾರಿಗೆ ಕೂಡುವ ರಸ್ತೆ ನಿರ್ಮಾಣಕ್ಕೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭೂಮಿಪೂಜೆ ನರವೇರಿಸಿದರು. ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ, ತಾಪಂ ಮಾಜಿ ಸದಸ್ಯ ಮಲ್ಲು ರಾಠೋಡ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಹಿರೇಮಠ ಇತರರಿದ್ದರು.
Published on

ಆಲಮಟ್ಟಿ: ಕಾಮಗಾರಿಗಳಿಗೆ ಅಗತ್ಯ ಅನುದಾನ ನೀಡಲಾಗುತ್ತಿದೆ. ಕೆಲ ಸಂದರ್ಭದಲ್ಲಿ ಅನುದಾನ ಕೊರತೆಯ ನೆಪ ಹೇಳಿ ಕಾಮಗಾರಿ ಮೊಟಕುಗೊಳಿಸುವುದಾಗಲಿ, ಕಳಪೆ ಕಾಮಗಾರಿ ಕೈಗೊಳ್ಳುವುದಾಗಿ ಮಾಡಬಾರದು. ಅಗತ್ಯವಿದ್ದರೆ ಇನ್ನೂ ಅನುದಾನ ಒದಗಿಸುವುದಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಇಲ್ಲಿನ ರಾಷ್ಟ್ರೀಯ ಹಳೇ ಹೆದ್ದಾರಿ-13ರಿಂದ ಆಲಮಟ್ಟಿ-ನಾರಾಯಣಪುರ ರಾಜ್ಯ ಹೆದ್ದಾರಿಗೆ ಕೂಡುವ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಆಲಮಟ್ಟಿ ಪುನರ್ವಸತಿ ಕೇಂದ್ರದ ಪ್ರಮುಖ ರಸ್ತೆ ಇದಾಗಿದ್ದು, ರಸ್ತೆ ಅಗಲೀಕರಣಗೊಳಿಸಿ ವಾಹನಗಳ ಸಂಚಾರಕ್ಕೆ ಮತ್ತು ನಾಗರಿಕರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕು. ಆಲಮಟ್ಟಿ ಪುನರ್ವಸತಿ ಕೇಂದ್ರದಲ್ಲಿ ಮಳೆ ಮತ್ತು ಚರಂಡಿ ನೀರು ನಿಲ್ಲದಂತೆ ಈಗಾಗಲೇ ಅಗತ್ಯ ಚರಂಡಿ ನಿರ್ಮಿಸಲಾಗಿದ್ದು, ಮೊಟಕುಗೊಂಡಿರುವ ಚರಂಡಿ ಕಾಮಗಾರಿಯನ್ನು ವಿಸ್ತರಿಸಿ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಅಗತ್ಯ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.

ತಾಪಂ ಮಾಜಿ ಸದಸ್ಯ ಮಲ್ಲು ರಾಠೋಡ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಹಿರೇಮಠ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಿ.ಜೆ.ನದಾಫ್, ಮಹಾಂತೇಶ ಹಿರೇಮಠ, ಭೀಮಣ್ಣ ಪತ್ತಾರ, ಭೀಮಾಶಂಕರ ಉದಂಡಿ, ಗ್ರಾಪಂ ಮಾಜಿ ಅಧ್ಯಕ್ಷೆ ಸೈದಾಮಾ ಬೆಣ್ಣಿ, ಮಾರುತಿ ವಡ್ಡರ, ಶಾಂತಪ್ಪ ಹೆರಕಲ್ಲ, ಚಂದ್ರಶೇಖರ ಧರ್ಮರ, ಎಂ.ಕೆ. ಮುತ್ತಣ್ಣವರ, ಮುಬಾರಕ ಬಾಗಲಕೋಟ, ಎಂ.ಡಿ. ಬಾಗಲಕೋಟ, ಗುತ್ತಿಗೆದಾರ ಶ್ಯಾಮ ಪಾತ್ರದ ಉಪಸ್ಥಿತರಿದ್ದರು.

ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ ಹಾಗೂ ಗ್ರಾಪಂ ಸದಸ್ಯೆ ಶೋಭಾ ಲಮಾಣಿ ಅವರು ಸಚಿವರಿಗೆ ಆರತಿ ಬೆಳಗಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net