ಗಣೇಶೋತ್ಸವದ ಪ್ರಯುಕ್ತ ಕ್ಯಾರಂ, ಚೆಸ್ ಪಂದ್ಯಾಟ

ches caram
Published on

ಮಡಿಕೇರಿ: ಮಡಿಕೇರಿಯ ಚೈನ್‌ಗೇಟ್‌ನ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿಯ ೧೮ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಶನಿವಾರ, ಭಾನುವಾರ ಕ್ಯಾರಂ ಹಾಗೂ ಚೆಸ್ ಪಂದ್ಯವನ್ನು ಆಯೋಜಿಸಲಾಗಿತ್ತು.

ಡಾಕ್ಟರ್ ಕೆ.ಬಿ.ಸೂರ್ಯ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಡಿಕೇರಿ ಮೂಡ ಸದಸ್ಯರಾದ ಆರ್.ಪಿ.ಚಂದ್ರಶೇಖರ್, ಸಂಘದ ಅಧ್ಯಕ್ಷ ರಾಹುಲ್, ಪ್ರಮುಖರಾದ ರಾಘವೇಂದ್ರ, ಮಧುಗೌಡ, ಸಚಿನ್, ಸುನಿಲ್, ಎಸ್.ಲೋಕೇಶ್, ಆರ್.ಸಿ.ಗೌರವ್, ಬಿ.ಬಿ.ದರ್ಶನ್, ಪ್ರಶಾಂತ್, ಪುನೀತ್ ಕುಮಾರ್, ಯತೀಶ್ ರಂಜಿತ್ ಹಾಗೂ ರಾಜೇಶ್ ಮತ್ತು ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net