ರಂಜಾನ್ ಕರೊನಾ ಮಾರ್ಗಸೂಚಿ ಬಿಡುಗಡೆ: ಪಾಲಿಕೆ ಆಯುಕ್ತ

Chidanand Vatare (2)
Published on

ಶಿವಮೊಗ್ಗ: ಕರೊನಾ ಹಿನ್ನೆಲೆಯಲ್ಲಿ ರಂಜಾನ್ ಆಚರಣೆ ವೇಳೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜತೆಗೆ ಪ್ರತಿ ಮಸೀದಿಯಲ್ಲಿ ಮಾರ್ಗಸೂಚಿ ಪಾಲನೆ ಖಾತ್ರಿಪಡಿಸಲು ಪಾಲನಾ ಸಮಿತಿ ರಚಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೂಚಿಸಿದ್ದಾರೆ.

ಕಂಟೈನ್‌ಮೆಂಟ್ ವಲಯದ ಮಸೀದಿ ಹಾಗೂ ಇತರ ಪ್ರಾರ್ಥನಾ ಮಂದಿರಗಳನ್ನು ಸಾರ್ವಜನಿಕರಿಗೆ ತೆರೆಯಬಾರದು. 60 ವರ್ಷ ಮೇಲ್ಪಟ್ಟವರು, ತೀವ್ರ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿರಬೇಕು ಎಂದಿದ್ದಾರೆ. ಗುಂಪು ಸೇರಬಾರದು. ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಅಗತ್ಯವಿದ್ದರೆ ಪಾಳಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಆಜಾನ್ ಆರಂಭದ 5 ನಿಮಿಷ ಮೊದಲು ಮಸೀದಿ ತೆರೆಯಬೇಕು ಮತ್ತು ನಮಾಜ್ ಮುಗಿದ ತಕ್ಷಣ ಮಸೀದಿ ಮುಚ್ಚಬೇಕು ಎಂದಿದ್ದಾರೆ.

ಇಫ್ತಾರ್ ಕೂಟಗಳನ್ನು ಮನೆಗಳಲ್ಲಿಯೇ ಮಾಡಬೇಕು. ಪ್ರಾರ್ಥನೆಗಾಗಿ ಮಸೀದಿಗೆ ಬರಬೇಕು. ಪ್ರತಿ ಪ್ರಾರ್ಥನೆ ಬಳಿಕ ಮಸೀದಿ ಸ್ವಚ್ಛಗೊಳಿಸಬೇಕು. ಕರೊನಾ ಮಾರ್ಗಸೂಚಿ ಪಾಲನೆ ಕುರಿತು ಮಸೀದಿಯಲ್ಲಿ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net